alex Certify ಗುಡ್‌ ನ್ಯೂಸ್: ಕೇವಲ 30 ನಿಮಿಷದಲ್ಲಿ ಗ್ರಾಹಕರಿಗೆ ಸಿಗಲಿದೆ ಈ ಸಾಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್‌ ನ್ಯೂಸ್: ಕೇವಲ 30 ನಿಮಿಷದಲ್ಲಿ ಗ್ರಾಹಕರಿಗೆ ಸಿಗಲಿದೆ ಈ ಸಾಲ

ದೇಶದ ಮೂರನೇ ಅತಿದೊಡ್ಡ ಸರ್ಕಾರಿ ಬ್ಯಾಂಕ್,‌ ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಡಿಜಿಟಲ್ ಸಾಲ ನೀಡಲು ಮುಂದಾಗಿದೆ. ಇದ್ರ ಮೂಲಕ ಕೆಲವೇ ಕ್ಷಣಗಳಲ್ಲಿ ಆರಾಮವಾಗಿ ಸಾಲ ಪಡೆಯಬಹುದಾಗಿದೆ.

ಗೃಹ ಸಾಲ, ಕಾರು ಸಾಲ ಮತ್ತು ವೈಯಕ್ತಿಕ ಸಾಲಗಳಿಗೆ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಡಿಮೆ ಮಾಡಲು ಬ್ಯಾಂಕ್ ಆನ್ಲೈನ್ ಸಾಲ ಸೌಲಭ್ಯಕ್ಕೆ ಚಾಲನೆ ನೀಡಿದೆ. ಗೃಹ ಸಾಲ, ಕಾರು ಸಾಲ ಮತ್ತು ವೈಯಕ್ತಿಕ ಸಾಲದ ಅರ್ಜಿಗಳನ್ನು 30 ನಿಮಿಷಗಳಲ್ಲಿ ಅನುಮೋದಿಸಲಾಗುವುದು.

ಬ್ಯಾಂಕ್ ಆಫ್ ಬರೋಡಾ ಗ್ರಾಹಕರು ನೀವಾಗಿದ್ದರೆ ಚಿಲ್ಲರೆ ಶಾಪಿಂಗ್ ಗೆ ಪೂರ್ವ ಅನುಮೋದಿತ ಮೈಕ್ರೋ ಪರ್ಸನಲ್ ಲೋನ್ ಕೂಡ ಪಡೆಯಬಹುದು. ಇದನ್ನು ಬ್ಯಾಂಕ್ 60 ಸೆಕೆಂಡ್ ಗಳಲ್ಲಿ ಅನುಮೋದಿಸುತ್ತದೆ. ಇದನ್ನು ಗ್ರಾಹಕರು 3ರಿಂದ 18 ತಿಂಗಳಲ್ಲಿ ಇಎಂಐ ರೂಪದಲ್ಲಿ ಹಿಂತಿರುಗಿಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...