ನವದೆಹಲಿ: ಜನ್ ಧನ್ ಖಾತೆಯಿಂದ ಹಣ ವಿತ್ ಡ್ರಾ ಮಾಡುವ ವೇಳೆ 100 ರೂಪಾಯಿ ಶುಲ್ಕ ವಿಧಿಸಲಾಗುತ್ತೆ. ಬ್ಯಾಂಕ್ ಆಫ್ ಬರೋಡಾ ಠೇವಣಿ ಹಾಗೂ ವಿತ್ ಡ್ರಾ ಮಾಡಲು ಶುಲ್ಕ ಪಾವತಿ ಮಾಡುವ ನಿಯಮ ಜಾರಿಗೆ ತಂದಿದೆ ಎಂದು ಹೇಳಲಾಗಿತ್ತು. ಪಿಐಬಿ ಫ್ಯಾಕ್ಟ್ ಚೆಕ್ ನಲ್ಲಿ ಇದು ಸುಳ್ಳು ಎಂಬುದು ಗೊತ್ತಾಗಿದೆ.
ಈ ಬಗ್ಗೆ ಪಿಐಬಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ನಕಲಿ ಸುದ್ದಿಗಳನ್ನು ಬೇಧಿಸುವ ಕೆಲಸವನ್ನು ಪಿಐಬಿ ಮಾಡ್ತಿದೆ. ಜನರನ್ನು ತಪ್ಪು ದಾರಿಗೆಳೆಯುವ ಸುದ್ದಿಗಳ ಸತ್ಯಾಸತ್ಯತೆಯನ್ನು ಜನರ ಮುಂದಿಡುವ ಕೆಲಸ ಮಾಡ್ತಿದೆ. ಇದ್ರಿಂದ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಸಿಗುತ್ತಿದೆ.
ಕೆಲವು ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕುಗಳು ನಗದು ಠೇವಣಿ ಮತ್ತು ಉಳಿತಾಯ ಖಾತೆಗಳಲ್ಲಿ ಹಣವನ್ನು ಹಿಂಪಡೆಯುವ ಶುಲ್ಕವನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದು ಮಾಧ್ಯಮ ವರದಿಯೊಂದು ಹೇಳಿತ್ತು. ಈ ಬಗ್ಗೆ ಮೊದಲ ಟ್ವಿಟರ್ ಮಾಡಿದ ಪಿಐಬಿ ಇದು ಸುಳ್ಳು ಎಂದಿದೆ. ಶುಲ್ಕ ಹೆಚ್ಚಿಸುವ ಯಾವುದೇ ನಿರ್ಧಾರವನ್ನು ಬ್ಯಾಂಕ್ ತೆಗೆದುಕೊಂಡಿಲ್ಲ ಎಂದಿದೆ.
ಅದೇ ರೀತಿ, ಮತ್ತೊಂದು ಟ್ವೀಟ್ನಲ್ಲಿ ಜನ ಧನ್ ಖಾತೆಗಳಿಂದ ಹಣವನ್ನು ಹಿಂಪಡೆಯಲು 100 ರೂಪಾಯಿ ಶುಲ್ಕ ವಿಧಿಸಲಾಗುವುದು ಎಂಬ ವರದಿ ಸುಳ್ಳು ಎಂದು ತಿಳಿಸಿದೆ. ಜನ ಧನ್ ಖಾತೆ ಸೇವೆಗಳಿಗೆ ಯಾವುದೇ ಶುಲ್ಕವಿಲ್ಲ.
ಮೂರನೆಯ ಟ್ವೀಟ್ನಲ್ಲಿ, ಬ್ಯಾಂಕ್ ಆಫ್ ಬರೋಡಾ ನಗದು ಠೇವಣಿ ಮತ್ತು ಉಳಿತಾಯ ಖಾತೆಗಳಲ್ಲಿ ಹಣವನ್ನು ವಿತ್ ಡ್ರಾ ಮಾಡುವ ಶುಲ್ಕವನ್ನು ಹೆಚ್ಚಿಸಿದೆ ಎಂಬ ಸುದ್ದಿ ಕೂಡ ಸುಳ್ಳು ಎಂಬ ಮಾಹಿತಿ ನೀಡಲಾಗಿದೆ.