ನವದೆಹಲಿ: ಬ್ಯಾಂಕ್ ಆಫ್ ಬರೋಡಾ ಮನೆ ಮತ್ತು ಕಾರು ಸಾಲದ ಬಡ್ಡಿ ದರವನ್ನು ಕಡಿತಗೊಳಿಸಿದೆ. ರಿಯಾಯಿತಿ ಶುಲ್ಕಗಳ ಜೊತೆಗೆ ಸೀಮಿತ ಅವಧಿಗೆ ಗೃಹ ಮತ್ತು ಕಾರು ಸಾಲಗಳ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಿರುವುದಾಗಿ ಬ್ಯಾಂಕ್ ಆಫ್ ಬರೋಡಾ ಸೋಮವಾರ ತಿಳಿಸಿದೆ.
ಹೊಸ ದರಗಳು 30 ಜೂನ್, 2022 ರವರೆಗೆ ಅನ್ವಯಿಸುತ್ತವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೀಮಿತ ಅವಧಿಗೆ ವಾರ್ಷಿಕ ಶೇ. 6.75 ರಿಂದ ವಾರ್ಷಿಕ ಶೇ. 6.50 ಕ್ಕೆ ಗೃಹ ಸಾಲವನ್ನು ಕಡಿಮೆ ಮಾಡುವುದಾಗಿ ಘೋಷಿಸಿದೆ. ಕಾರ್ ಸಾಲಗಳಿಗೆ ಬಡ್ಡಿ ದರವನ್ನು ಹಿಂದಿನ ಶೇ. 7.25 ರಿಂದ ವಾರ್ಷಿಕ ಶೇ. 7ಕ್ಕೆ ಕಡಿತಗೊಳಿಸಲಾಗಿದೆ.
ಈ ವರ್ಷದ ಜೂನ್ ಅಂತ್ಯದವರೆಗೆ ಸೀಮಿತ ಅವಧಿಗೆ 1,500 ರೂ.(ಜೊತೆಗೆ GST) ಗೆ ಸಂಸ್ಕರಣಾ ಶುಲ್ಕವನ್ನು ಕಡಿಮೆ ಮಾಡಿದೆ. ಈ ವಿಶೇಷ ದರದ ಕೊಡುಗೆಯನ್ನು ಸಾಲಗಾರನ ಕ್ರೆಡಿಟ್ ಪ್ರೊಫೈಲ್‌ಗೆ ಲಿಂಕ್ ಮಾಡಲಾಗಿದೆ ಎಂದು ಹೇಳಿಕೆ ತಿಳಿಸಿದೆ.