ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಪ್ರಮುಖ ಸುದ್ದಿಯೊಂದಿದೆ. ಬ್ಯಾಂಕ್ ಆಫ್ ಬರೋಡಾ, ಚೆಕ್ ಪಾವತಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾವಣೆ ಮಾಡ್ತಿದೆ. ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್, ಐಎಫ್‌ಎಸ್‌ಸಿ ಕೋಡ್‌ಗೆ ಸಂಬಂಧಿಸಿದ ಬದಲಾವಣೆ ಮಾಡ್ತಿದೆ.
ಜೂನ್ 1, 2021 ರಿಂದ ಬ್ಯಾಂಕ್ ಆಫ್ ಬರೋಡಾ ಗ್ರಾಹಕರಿಗೆ ಪಾಸಿಟಿವ್ ಪೇ ಕನ್ಫರ್ಮೇಶನ್ ಕಡ್ಡಾಯಗೊಳಿಸಲಾಗಿದೆ. ವಂಚನೆಯಿಂದ ಗ್ರಾಹಕರನ್ನು ರಕ್ಷಿಸುವುದು ಇದ್ರ ಉದ್ದೇಶವಾಗಿದೆ. ಚೆಕ್ ನೀಡಿದಾಗ, ಬ್ಯಾಂಕಿಗೆ ಪೂರ್ಣ ವಿವರಗಳನ್ನು ನೀಡಬೇಕಾಗುತ್ತದೆ. ಚೆಕ್ ಪಾವತಿಸುವ ಮೊದಲು ಬ್ಯಾಂಕ್ ಈ ವಿವರಗಳನ್ನು ಪರಿಶೀಲಿಸುತ್ತದೆ. ಅದರಲ್ಲಿ ಯಾವುದೇ ದೋಷ ಕಂಡುಬಂದಲ್ಲಿ, ಬ್ಯಾಂಕ್ ಚೆಕ್ ತಿರಸ್ಕರಿಸುತ್ತದೆ. 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಚೆಕ್ ನೀಡಿದಾಗ ಮಾತ್ರ ಗ್ರಾಹಕರು ಸಕಾರಾತ್ಮಕ ವೇತನ ವ್ಯವಸ್ಥೆಯಡಿ ಚೆಕ್ ವಿವರಗಳನ್ನು ದೃಢೀಕರಿಸಬೇಕಾಗುತ್ತದೆ.
ಕೆನರಾ ಬ್ಯಾಂಕ್ ವೆಬ್‌ಸೈಟ್‌ನಲ್ಲಿ ನೀಡಿದ ಮಾಹಿತಿಯ ಪ್ರಕಾರ, ಜುಲೈ 1 ರಿಂದ ಐಎಫ್‌ಎಸ್‌ಸಿ ಕೋಡ್ ಬದಲಾಗಲಿದೆ. ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಹೊಸ ಐಎಫ್‌ಎಸ್‌ಸಿ ಕೋಡ್ ಜೂನ್ 30 ರೊಳಗೆ ನವೀಕರಿಸಲು ಸೂಚಿಸಲಾಗಿದೆ. ಹೊಸ ಐಎಫ್‌ಎಸ್‌ಸಿ ಕೋಡ್ ತಿಳಿಯಲು ಕೆನರಾ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಂಡಿದೆ.