ನವದೆಹಲಿ: ಕೆಲವು ಬ್ಯಾಂಕ್ ಗಳ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಏಪ್ರಿಲ್ 1 ರಿಂದ ವಿಲೀನಗೊಂಡ ಬ್ಯಾಂಕುಗಳ ಚೆಕ್ಬುಕ್ ಮತ್ತು ಪಾಸ್ ಬುಕ್ ಗಳು ಅಮಾನ್ಯವಾಗಲಿದ್ದು ಬ್ಯಾಂಕುಗಳ ಖಾತೆ, IFSC ಕೋಡ್ ಗಳಲ್ಲಿಯೂ ಬದಲಾವಣೆಯಾಗಲಿದೆ.
ಕೆಲವು ಬ್ಯಾಂಕುಗಳು ಬೇರೆ ಬ್ಯಾಂಕುಗಳ ಜೊತೆ ವಿಲೀನವಾಗಿದ್ದು, ಇಂತಹ ವಿಲೀನವಾದ ಬ್ಯಾಂಕುಗಳ ಚೆಕ್ಬುಕ್ ಮತ್ತು ಪಾಸ್ಬುಕ್ ಏಪ್ರಿಲ್ 1 ರಿಂದ ಅಮಾನ್ಯವಾಗಲಿದೆ. ಖಾತೆಯ ಸಂಖ್ಯೆ, ಐಎಫ್ಎಸ್ಸಿ ಕೋಡ್ ಕೂಡ ಬದಲಾವಣೆಯಾಗಲಿದೆ. ನೀವು ವಿಲೀನವಾದ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದರೆ ಹೊಸ ಚೆಕ್ಬುಕ್ ಮತ್ತು ಐಎಫ್ಎಸ್ಸಿ ಕೋಡ್ ಪರಿಶೀಲಿಸಿಕೊಳ್ಳುವುದು ಒಳ್ಳೆಯದು.
ದೇನಾ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನಿಟೆಡ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್ ಗಳು ವಿಲೀನವಾಗಿವೆ. ಕೆನರಾ ಬ್ಯಾಂಕ್ ನಲ್ಲಿ ಸಿಂಡಿಕೇಟ್ ಬ್ಯಾಂಕ್ ವಿಲೀನವಾಗಿದ್ದು 2021 ರ ಜೂನ್ 30 ರವರೆಗೆ ವಿಲೀನ ಅವಧಿಯನ್ನು ಮುಂದೂಡಲಾಗಿದೆ.