ನವದೆಹಲಿ: ಲಾಕ್ಡೌನ್ ಸಂದರ್ಭದಲ್ಲಿ ಇಎಂಐ ಪಾವತಿ ಮುಂದೂಡಿಕೆ ಮಾಡಿದ್ದು ಈ ಸಂದರ್ಭದಲ್ಲಿ ವಿಧಿಸಲಾಗಿದ್ದ ಚಕ್ರ ಬಡ್ಡಿ ಮನ್ನಾ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತಂತೆ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ.
ಆದರೆ, ಮೊರಾಟೋರಿಯಂ ಅವಧಿಯಲ್ಲಿ ಸಾಲ ಪಾವತಿಸಿದ ಗ್ರಾಹಕರಿಗೆ ಇದರಿಂದ ಸೌಲಭ್ಯ ಸಿಗುವುದಿಲ್ಲ ಎನ್ನುವುದನ್ನು ಮನಗಂಡಿರುವ ಸರ್ಕಾರ, ಸಾಲ ಪಾವತಿಸಿದ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಸೌಲಭ್ಯ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ಮೊರಾಟೋರಿಯಂ ಸಂದರ್ಭದಲ್ಲಿ ಸಾಲದ ಕಂತು ಪಾವತಿಸಿದ ಗ್ರಾಹಕರಿಗೆ ಈ ಸೌಲಭ್ಯ ನೀಡಲಾಗುವುದು. ಸಾಲದ ಕಂತು ಪಾವತಿಸಿದವರ ಚಕ್ರಬಡ್ಡಿ ಮನ್ನಾ ಮಾಡಲಿದ್ದು ಪಾವತಿಸದವರಿಗೂ ಸೌಲಭ್ಯ ನೀಡಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಾಲ ಪಾವತಿ ಮಾಡಿದವರಿಗೂ ಕ್ಯಾಶ್ ಬ್ಯಾಕ್ ನಂತಹ ಸೌಲಭ್ಯ ನೀಡುವ ಕುರಿತು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.