ಬೆಂಗಳೂರು: ಬ್ಯಾಂಕ್ ಗಳಲ್ಲಿ ನಿಮ್ಮ ಯಾವುದೇ ವ್ಯವಹಾರಗಳಿದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಹಣಕಾಸಿನ ವ್ಯವಹಾರ ವಿಳಂಬವಾಗುವ ಸಾಧ್ಯತೆ ಇದೆ.
ನಿನ್ನೆಯಷ್ಟೇ ಬೆಂಗಳೂರು ಬಂದ್ ನಡೆದಿದ್ದು, ನಾಳೆ ಸೆಪ್ಟೆಂಬರ್ 28 ರಂದು ಈದ್ ಮಿಲಾದ್ ರಜೆ ಇರುತ್ತದೆ. ಶುಕ್ರವಾರ ಸೆ. 29 ರಂದು ಕರ್ನಾಟಕ ಬಂದ್ ನಡೆಯಲಿದೆ. ಶನಿವಾರ ಒಂದು ದಿನ ಬ್ಯಾಂಕ್ ಇರಲಿದ್ದು, ಅ. 1 ರಂದು ಭಾನುವಾರ, ಅ. 2 ಗಾಂಧಿ ಜಯಂತಿಗೆ ರಜೆ ಇರುತ್ತದೆ.
ಹೀಗಾಗಿ ನಗದು, ಚೆಕ್ ಕ್ಲಿಯರೆನ್ಸ್, ಡಿಪಾಸಿಟ್, ವಿತ್ ಡ್ರಾ ಸೇರಿದಂತೆ ನಿಮ್ಮ ಯಾವುದೇ ಬ್ಯಾಂಕಿಂಗ್ ವ್ಯವಹಾರಗಳನ್ನು ಪೂರ್ಣಗೊಳಿಸುವುದು ಒಳ್ಳೆಯದು ಎಂದು ಹೇಳಲಾಗಿದೆ.