alex Certify ವಾಹನ, ಗೃಹ, ಇತರೆ ಸಾಲಗಾರರಿಗೆ ಶಾಕಿಂಗ್ ನ್ಯೂಸ್: ಬಡ್ಡಿದರ ಮತ್ತೆ ಏರಿಕೆ; ಆಗಸ್ಟ್ ಮೊದಲ ವಾರ ರೆಪೊ ದರ ಶೇ. 0.35 ರಷ್ಟು ಹೆಚ್ಚಳ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ, ಗೃಹ, ಇತರೆ ಸಾಲಗಾರರಿಗೆ ಶಾಕಿಂಗ್ ನ್ಯೂಸ್: ಬಡ್ಡಿದರ ಮತ್ತೆ ಏರಿಕೆ; ಆಗಸ್ಟ್ ಮೊದಲ ವಾರ ರೆಪೊ ದರ ಶೇ. 0.35 ರಷ್ಟು ಹೆಚ್ಚಳ ಸಾಧ್ಯತೆ

ನವದೆಹಲಿ: ಆರ್.ಬಿ.ಐ. ಹಣಕಾಸು ನೀತಿ ಪರಾಮರ್ಶೆ ಸಭೆ ಮುಂದಿನ ವಾರ ನಡೆಯಲಿದ್ದು, ರೆಪೊ ದರವನ್ನು ಮತ್ತೆ ಏರಿಕೆ ಮಾಡುವ ಸಾಧ್ಯತೆ ಇದೆ.

ಆಗಸ್ಟ್ ಮೊದಲ ವಾರ ರೆಪೊ ದರ ಶೇಕಡ 0.35 ರಷ್ಟು ಹೆಚ್ಚಳ ಮಾಡುವ ಸಾಧ್ಯತೆಯಿದ್ದು, ಇದರಿಂದ ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರ ಮತ್ತಷ್ಟು ಹೆಚ್ಚಳವಾಗಲಿದೆ.

ಹಣದುಬ್ಬರ ನಿಯಂತ್ರಣದ ಉದ್ದೇಶದಿಂದ ಆರ್.ಬಿ.ಐ. ಕಳೆದ ಎರಡು ಹಣಕಾಸು ನೀತಿ ಪರಾಮರ್ಶೆ ಸಭೆಗಳಲ್ಲಿ ರೆಪೊ ದರ ಏರಿಕೆ ಮಾಡಿತ್ತು. ಎರಡು ಸಲ ರೆಪೊ ದರ ಹೆಚ್ಚಳ ಮಾಡಿದ್ದು, ಒಟ್ಟು ಶೇಕಡ 0.90 ರಷ್ಟು ರೆಪೊ ದರ ಹೆಚ್ಚಳವಾಗಿದೆ.

ಆಗಸ್ಟ್ 3 ರಿಂದ 5 ರವರೆಗೆ ಆರ್.ಬಿ.ಐ. ಹಣಕಾಸು ಸಮಿತಿ ಪರಾಮರ್ಶೆ ಸಭೆ ನಡೆಯಲಿದ್ದು, ರೆಪೊ ದರವನ್ನು ಶೇಕಡ 0.35 ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ರೆಪೊ ದರ ಶೇಕಡ 0.35 ರಷ್ಟು ಹೆಚ್ಚಾದರೆ ಒಟ್ಟು ದರ ಶೇಕಡ 5.25 ಹೆಚ್ಚಳವಾಗಲಿದ್ದು, ಬ್ಯಾಂಕ್ ಗಳಲ್ಲಿ ಬಡ್ಡಿದರ ಶೇಕಡ 0.50 ಯಿಂದ ಶೇ. 1 ರಷ್ಟು ಏರಿಕೆಯಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...