ನವದೆಹಲಿ: ಹಬ್ಬದ ಸೀಸನ್ ಇರುವುದರಿಂದ ಭಾರತದ ಬಹುತೇಕ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳು ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ ಕೆಲವು ದಿನ ಮುಚ್ಚಲ್ಪಡುತ್ತವೆ.
ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ನೀಡಿರುವ ರಜಾದಿನಗಳ ಪಟ್ಟಿಯಂತೆ ಬ್ಯಾಂಕುಗಳು ನಿಗದಿತ ದಿನ ಮುಚ್ಚಿರುತ್ತವೆ. ಆದಾಗ್ಯೂ, ಹಲವಾರು ರಜಾದಿನಗಳು ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನುಗುಣವಾಗಿ ಬದಲಾಗಲಿವೆ ಎಂಬುದನ್ನು ಗಮನಿಸಬೇಕಿದೆ.
ಅಕ್ಟೋಬರ್‌ನಲ್ಲಿ ಸರಿಸುಮಾರು 21 ರಜಾದಿನಗಳಿವೆ. ಈ ರಜಾದಿನಗಳು ವಾರಾಂತ್ಯಗಳು ಮತ್ತು ಆರ್‌ಬಿಐ-ಕಡ್ಡಾಯ ಅಧಿಕೃತ ರಜಾದಿನಗಳ ಮಿಶ್ರಣವಾಗಿದೆ.
ಆರ್‌ಬಿಐ ಉಲ್ಲೇಖಿಸಿರುವ ರಜಾದಿನಗಳು ‘ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ಹಾಲಿಡೇ’, ‘ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್‌ಮೆಂಟ್ ಹಾಲಿಡೇ’ ಮತ್ತು ‘ಬ್ಯಾಂಕ್‌ಗಳ’ ಅಕೌಂಟ್ಸ್ ಕ್ಲೋಸಿಂಗ್ ‘ವಿಭಾಗಗಳ ಅಡಿಯಲ್ಲಿ ಬರುತ್ತದೆ.
ಅಕ್ಟೋಬರ್ ತಿಂಗಳ ರಜಾದಿನಗಳ ಸಂಪೂರ್ಣ ಪಟ್ಟಿ
1) ಅಕ್ಟೋಬರ್ 1 – ಅರ್ಧ ವಾರ್ಷಿಕ ಬ್ಯಾಂಕ್ ಖಾತೆಗಳ ಮುಚ್ಚುವಿಕೆ(ಗ್ಯಾಂಗ್ಟಾಕ್)
2) ಅಕ್ಟೋಬರ್ 2 – ಮಹಾತ್ಮ ಗಾಂಧಿ ಜಯಂತಿ (ಎಲ್ಲಾ ರಾಜ್ಯಗಳು)
3) ಅಕ್ಟೋಬರ್ 3 – ಭಾನುವಾರ
4) ಅಕ್ಟೋಬರ್ 6 – ಮಹಾಲಯ ಅಮಾವಾಸ್ಯೆ
5) ಅಕ್ಟೋಬರ್ 7 – ಲೈನಿಂಗ್‌ಥೌ ಸನಾಮಹಿ(ಇಂಫಾಲ್) ನ ಮೇರಾ ಚೌರೆನ್ ಹೌಬಾ
6) ಅಕ್ಟೋಬರ್ 9 – 2 ನೇ ಶನಿವಾರ
7) ಅಕ್ಟೋಬರ್ 10 – ಭಾನುವಾರ
8) ಅಕ್ಟೋಬರ್ 12 – ದುರ್ಗಾ ಪೂಜೆ(ಮಹಾ ಸಪ್ತಮಿ) / (ಅಗರ್ತಲಾ, ಕೋಲ್ಕತಾ)
9) ಅಕ್ಟೋಬರ್ 13 – ದುರ್ಗಾ ಪೂಜೆ (ಮಹಾ ಅಷ್ಟಮಿ) /
10) ಅಕ್ಟೋಬರ್ 14 – ದುರ್ಗಾ ಪೂಜೆ/ದಸರಾ(ಮಹಾ ನವಮಿ)/ಆಯುಧ ಪೂಜೆ
11) ಅಕ್ಟೋಬರ್ 15 – ದುರ್ಗಾ ಪೂಜೆ/ ದಸರಾ/ ದಸರಾ(ವಿಜಯ ದಶಮಿ)/
12) ಅಕ್ಟೋಬರ್ 16 – ದುರ್ಗಾ ಪೂಜೆ (ದಾಸೈನ್) / (ಗ್ಯಾಂಗ್ಟಾಕ್)
13) ಅಕ್ಟೋಬರ್ 17 – ಭಾನುವಾರ
14) ಅಕ್ಟೋಬರ್ 18 – ಕತಿ ಬಿಹು (ಗುವಾಹಟಿ)
15) ಅಕ್ಟೋಬರ್ 19-Id-ಈದ್ ಮಿಲಾದ್
16) ಅಕ್ಟೋಬರ್ 20-ಮಹರ್ಷಿ ವಾಲ್ಮೀಕಿ ಅವರ ಜನ್ಮದಿನ
17) ಅಕ್ಟೋಬರ್ 22-ಶುಕ್ರವಾರ ಈದ್-ಇ-ಮಿಲಾದ್-ಉಲ್-ನಬಿ (ಜಮ್ಮು, ಶ್ರೀನಗರ)
18) ಅಕ್ಟೋಬರ್ 23 – 4 ನೇ ಶನಿವಾರ
19) ಅಕ್ಟೋಬರ್ 24 – ಭಾನುವಾರ
20) ಅಕ್ಟೋಬರ್ 26 – ಪ್ರವೇಶ ದಿನ (ಜಮ್ಮು, ಶ್ರೀನಗರ)
21) ಅಕ್ಟೋಬರ್ 31 – ಭಾನುವಾರ