ಮೊದಲೆಲ್ಲ ಬ್ಯಾಂಕ್ಗಳಿಗೆ ರಜೆ ಅಂದರೆ ತಲೆ ಕೆಟ್ಟು ಹೋಗ್ತಿತ್ತು. ಆದರೆ ಈಗ ಹಾಗಲ್ಲ ನೆಟ್ ಬ್ಯಾಂಕಿಂಗ್ ಮೂಲಕ ಅವಶ್ಯಕ ವ್ಯವಹಾರಗಳನ್ನ ನಾವೇ ನಡೆಸಬಹುದಾಗಿದೆ. ಹಾಗಂತ ನಾವು ಬ್ಯಾಂಕ್ಗಳನ್ನೂ ನಿರ್ಲಕ್ಷ್ಯ ಮಾಡುವಂತೆಯೂ ಇಲ್ಲ. ಲಾಕರ್ ವ್ಯವಸ್ಥೆ, ಸಾಲದ ಬಗ್ಗೆ ಮಾಹಿತಿ ಹೀಗೆ ಮುಖ್ಯ ಕೆಲಸ ಆಗಬೇಕು ಅಂದರೆ ನಾವು ಬ್ಯಾಂಕ್ಗೆ ತೆರಳಲೇಬೇಕು.
ಆರ್ಬಿಐ ಫೆಬ್ರವರಿ ತಿಂಗಳಲ್ಲಿ ಯಾವ ದಿನಗಳಂದು ಯಾವ ಪ್ರದೇಶದ ಬ್ಯಾಂಕ್ಗಳು ಬಂದ್ ಇರಲಿವೆ ಅನ್ನೋದ್ರ ಬಗ್ಗೆ ಪಟ್ಟಿ ಬಿಡುಗಡೆ ಮಾಡಿದೆ. ಇದರನ್ವಯ ಫೆಬ್ರವರಿ 12ರಂದು ಗ್ಯಾಂಗ್ಟೋಕ್ನಲ್ಲಿ ಸೋನಮ್ ಲೋಚಾರ್ ಹಿನ್ನೆಲೆ ರಜೆ ಇರಲಿದೆ. ಬೇಲಾಪುರ, ಮುಂಬೈ ಹಾಗೂ ನಾಗ್ಪುರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಪ್ರಯುಕ್ತ ಬ್ಯಾಂಕ್ಗಳು ಬಂದ್ ಇರಲಿದೆ. ಮುಂದಿನ ತಿಂಗಳು ಬ್ಯಾಂಕ್ಗಳಿಗೆ 8 ದಿನಗಳ ಕಾಲ ಕ್ಲೋಸ್ ಇರಲಿದ್ದು ಇದರಲ್ಲಿ 6 ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ಆಗಿರಲಿದೆ.
ಫೆಬ್ರವರಿ ತಿಂಗಳಲ್ಲಿ ಬ್ಯಾಂಕ್ಗಳ ರಜೆ ಬಗ್ಗೆ ಇಲ್ಲಿದೆ ಪ್ರಮುಖ ಮಾಹಿತಿ
ಫೆಬ್ರವರಿ 7 : ಭಾನುವಾರ
ಫೆಬ್ರವರಿ 13 :ಎರಡನೇ ಶನಿವಾರ
ಫೆಬ್ರವರಿ 14: ಭಾನುವಾರ
ಫೆಬ್ರವರಿ 21: ಭಾನುವಾರ
ಫೆಬ್ರವರಿ 27: 4ನೇ ಶನಿವಾರ
ಫೆಬ್ರವರಿ 28 : ಭಾನುವಾರ
ಆದರೆ ಈ ರಜಾ ದಿನವೂ ನೆಟ್ ಬ್ಯಾಂಕಿಂಗ್ ಕಾರ್ಯದಲ್ಲೇ ಇರಲಿದೆ. ಹೀಗಾಗಿ ನೀವು ನೆಟ್ ಬ್ಯಾಂಕಿಂಗ್ ಮೂಲಕ ಅಗತ್ಯ ಬ್ಯಾಂಕಿಂಗ್ ವ್ಯವಹಾರ ನಡೆಸಬಹುದಾಗಿದೆ.