ಆಗಸ್ಟ್ ತಿಂಗಳಲ್ಲಿ 13 ದಿನ ಬ್ಯಾಂಕ್ ಗಳಿಗೆ ರಜೆ ಇದೆ. ನಿಮ್ಮ ಯಾವುದೇ ಬ್ಯಾಂಕಿಂಗ್ ವ್ಯವಹಾರಗಳಿದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು.
ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ರಜಾ ಪಟ್ಟಿಯ ಪ್ರಕಾರ, ಆಗಸ್ಟ್ ತಿಂಗಳು ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 13 ದಿನಗಳ ಕಾಲ ಬ್ಯಾಂಕ್ ಗಳು ಮುಚ್ಚಿರುತ್ತವೆ.
ಆಗಸ್ಟ್ ತಿಂಗಳಿನಲ್ಲಿ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತದೆ. ಇದು ಸ್ವಾತಂತ್ರ್ಯ ದಿನ, ರಕ್ಷಾಬಂಧನ್, ಜನ್ಮಾಷ್ಟಮಿ ಹಬ್ಬಗಳನ್ನು ಒಳಗೊಂಡಿದೆ. ಶನಿವಾರ ಮತ್ತು ಭಾನುವಾರ ಸೇರಿದಂತೆ ಈ ತಿಂಗಳು ಒಟ್ಟು 13 ದಿನಗಳ ಕಾಲ ಬ್ಯಾಂಕ್ ಗಳು ಮುಚ್ಚಿರುತ್ತವೆ.
ಆಗಸ್ಟ್ 2022 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ:
1 ಆಗಸ್ಟ್ 2022 – ದ್ರುಪಕಾ ಶೀ-ಜಿ ಹಬ್ಬ (ಗ್ಯಾಂಗ್ಟಾಕ್)
7 ಆಗಸ್ಟ್ 2022 – ಭಾನುವಾರ
8 ಆಗಸ್ಟ್ 2022 – ಮೊಹರಂ(ಜಮ್ಮು ಮತ್ತು ಶ್ರೀನಗರ)
ಆಗಸ್ಟ್ 9, 2022 – ಚಂಡೀಗಢ, ಗುವಾಹಟಿ, ಇಂಫಾಲ್, ಡೆಹ್ರಾಡೂನ್, ಶಿಮ್ಲಾ, ತಿರುವನಂತಪುರಂ, ಭುವನೇಶ್ವರ್, ಜಮ್ಮು, ಪಣಜಿ, ಶಿಲ್ಲಾಂಗ್ ಹೊರತುಪಡಿಸಿ ಇಡೀ ದೇಶದಲ್ಲಿ ರಜೆ ಇರುತ್ತದೆ.
11 ಆಗಸ್ಟ್ 2022 – ರಕ್ಷಾಬಂಧನ್
13 ಆಗಸ್ಟ್ 2022 – ಎರಡನೇ ಶನಿವಾರ
14 ಆಗಸ್ಟ್ 2022-ಭಾನುವಾರ
15 ಆಗಸ್ಟ್ 2022-ಸ್ವಾತಂತ್ರ್ಯ ದಿನ
16 ಆಗಸ್ಟ್ 2022 – ಪಾರ್ಸಿ ಹೊಸ ವರ್ಷ(ಮುಂಬೈ ಮತ್ತು ನಾಗ್ಪುರದಲ್ಲಿ ರಜೆ)
18 ಆಗಸ್ಟ್ 2022 – ಜನ್ಮಾಷ್ಟಮಿ
21 ಆಗಸ್ಟ್ 2022-ಭಾನುವಾರ
28 ಆಗಸ್ಟ್ 2022-ಭಾನುವಾರ
ಆಗಸ್ಟ್ 31, 2022 – ಗಣೇಶ ಚತುರ್ಥಿ(ಗುಜರಾತ್, ಮಹಾರಾಷ್ಟ್ರ, ಕರ್ನಾಟಕದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ)