ಆಗಸ್ಟ್ ನಲ್ಲಿ ಬ್ಯಾಂಕ್ ಗಳಿಗೆ 15 ದಿನ ರಜೆ ಇದೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿವೆ. ಆದರೆ, ಆಗಸ್ಟ್ ನಲ್ಲಿ ಬ್ಯಾಂಕ್ ಗಳಿಗೆ 15 ದಿನ ರಜೆ ಇರುವುದಿಲ್ಲ. ಇಂತಹ ಗೊಂದಲ, ವರದಿ ಸತ್ಯಕ್ಕೆ ದೂರವಾಗಿವೆ.
ಆಗಸ್ಟ್ ನಲ್ಲಿ 5 ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಸೇರಿ 7 ದಿನ ರಜೆ ಇರುತ್ತದೆ. ಇದರೊಂದಿಗೆ, ಆಗಸ್ಟ್ 20 ರಂದು ಮೊಹರಂ, ವರಮಹಾಲಕ್ಷ್ಮಿ ಹಬ್ಬದ ರಜೆ ಇದೆ. ಆಗಸ್ಟ್ 15 ಭಾನುವಾರ ಬಂದಿದೆ. ಹೀಗಾಗಿ ಆಗಸ್ಟ್ ನಲ್ಲಿ ವಾರದ ರಜೆ ಸೇರಿದಂತೆ 8 ದಿನ ಮಾತ್ರ ರಜೆ ಇದೆ.
ಬ್ಯಾಂಕ್ ರಜೆ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆ ಒಳಪಟ್ಟಿದ್ದರೂ, ಆಗಸ್ಟ್ ನಲ್ಲಿ ಮಾತ್ರ ಯಾವ ರಾಜ್ಯದಲ್ಲಿಯೂ 15 ದಿನ ಬ್ಯಾಂಕ್ ಗಳಿಗೆ ರಜೆ ಇರುವುದಿಲ್ಲ. ಆರ್.ಬಿ.ಐ. ವೆಬ್ ಸೈಟ್ ನಲ್ಲಿಯೂ ಆಗಸ್ಟ್ ನಲ್ಲಿ 15 ರಜೆ ಬಗ್ಗೆ ಮಾಹಿತಿ ಇಲ್ಲವಾಗಿದೆ.