ರಿಸರ್ವ್ ಬ್ಯಾಂಕ್ ಆಫ್ ಹಾಲಿಡೇ ಕ್ಯಾಲೆಂಡರ್ ಪ್ರಕಾರ, ಜುಲೈನಲ್ಲಿ 4 ಭಾನುವಾರ, 2 ಮತ್ತು 4 ನೇ ಶನಿವಾರ ಸೇರಿ 6 ದಿನಗಳಲ್ಲಿ ಬ್ಯಾಂಕುಗಳ ಸಾಪ್ತಾಹಿಕ ರಜಾದಿನಗಳು ಇರಲಿದೆ. ಇದರೊಂದಿಗೆ ಇನ್ನೂ 9 ದಿನಗಳವರೆಗೆ ಬ್ಯಾಂಕ್ ಗಳಿಗೆ ರಜೆ ಇರಲಿದೆ. ಈ ಇತರ ರಜಾದಿನಗಳು ದೇಶಾದ್ಯಂತ ಒಟ್ಟಿಗೆ ಇರುವುದಿಲ್ಲ. ಆಯಾ ಸ್ಥಳ, ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಬ್ಯಾಂಕುಗಳು ಒಟ್ಟು 15 ದಿನಗಳವರೆಗೆ ಕಾರ್ಯನಿರ್ವಹಿಸುವುದಿಲ್ಲ.
ಜುಲೈನಲ್ಲಿ ಬ್ಯಾಂಕಿನ ವಾರ್ಷಿಕ ರಜೆ:
ಜುಲೈ 4 – ಭಾನುವಾರ.
ಜುಲೈ 10 – ತಿಂಗಳ ಎರಡನೇ ಶನಿವಾರ.
ಜುಲೈ 11 – ಭಾನುವಾರ.
ಜುಲೈ 18 – ಭಾನುವಾರ.
ಜುಲೈ 24 – ತಿಂಗಳ ನಾಲ್ಕನೇ ಶನಿವಾರ.
ಜುಲೈ 25 – ಭಾನುವಾರ.
ಜುಲೈ 2021 ರಲ್ಲಿ ಇತರೆ ರಜಾದಿನಗಳು:
ಜುಲೈ 12 – ಕಾಂಗ್ (ರಥಜಾತ್ರ) / ರಥಯಾತ್ರೆ – ಭುವನೇಶ್ವರ ಮತ್ತು ಇಂಫಾಲ್.
ಜುಲೈ 13 – ಭಾನು ಜಯಂತಿ – ಗ್ಯಾಂಗ್ಟಾಕ್.
ಜುಲೈ 14 – ದ್ರುಪಕ ಜಯಂತಿ – ಗ್ಯಾಂಗ್ಟಾಕ್.
ಜುಲೈ 16 – ಹರೆಲ್- ಡೆಹ್ರಾಡೂನ್.
ಜುಲೈ 17 – ಯು ತಿರೋತ್ ಸಿಂಗ್ ಡೇ / ಖಾರ್ಚಿ ಪೂಜಾ – ಅಗರ್ತಲಾ / ಶಿಲ್ಲಾಂಗ್.
ಜುಲೈ 19 – ಗುರು ರಿನ್‌ಪೋಚೆ ಅವರ ತುಂಗ್ಕರ್ ಶೆಚು-ಗ್ಯಾಂಗ್ಟಾಕ್.
ಜುಲೈ 20 – ಬಕ್ರಿದ್ – ಜಮ್ಮು, ಕೊಚ್ಚಿ, ಶ್ರೀನಗರ, ಮತ್ತು ತಿರುವನಂತಪುರಂ.
ಜುಲೈ 21 – ಬಕ್ರಿದ್ (ಇಡ್-ಉಲ್-ಜುಹಾ) – ಐಜಾಲ್, ಭುವನೇಶ್ವರ, ಗ್ಯಾಂಗ್ಟಾಕ್, ಕೊಚ್ಚಿ ಮತ್ತು ತಿರುವನಂತಪುರಂ ಹೊರತುಪಡಿಸಿ ಎಲ್ಲಾ ಸ್ಥಳಗಳಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ.
ಜುಲೈ 31 – ಕೆರ್ ಪೂಜಾ – ಅಗರ್ತಲಾ.