ಈ ಶನಿವಾರದಿಂದ ಬ್ಯಾಂಕ್ ಗಳಿಗೆ ನಿರಂತರ ರಜೆ ಇದೆ. ಸಾಲು ಸಾಲು ರಜೆ ಇರುವುದರಿಂದ ನಿಮ್ಮ ಹಣಕಾಸು ವ್ಯವಹಾರಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ.
ಹಾಗಾಗಿ ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳಿಗೆ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು.
ಅಕ್ಟೋಬರ್ 24 – 4ನೇ ಶನಿವಾರ
ಅಕ್ಟೋಬರ್ 25 ಭಾನುವಾರ – ಆಯುಧ ಪೂಜೆ
ಅಕ್ಟೋಬರ್ 26 ಸೋಮವಾರ – ವಿಜಯದಶಮಿ
ಅಕ್ಟೋಬರ್ 30 ಶುಕ್ರವಾರ – ಈದ್-ಮಿಲಾದ್
ಅಕ್ಟೋಬರ್ 31 ಶನಿವಾರ – ಮಹರ್ಷಿ ವಾಲ್ಮೀಕಿ ಜಯಂತಿ
ನವಂಬರ್ 1 ಭಾನುವಾರ – ಕನ್ನಡ ರಾಜ್ಯೋತ್ಸವ
ಹೀಗೆ ಹಬ್ಬ ವಾರಾಂತ್ಯ ರಜೆಗಳ ಕಾರಣದಿಂದ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆ ಇದ್ದು ನಿಮ್ಮ ಹಣ ವಿತ್ ಡ್ರಾ, ಠೇವಣಿ, ಚೆಕ್ ಮೊದಲಾದ ವ್ಯವಹಾರಗಳಿದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳಿ ಎನ್ನಲಾಗಿದೆ.