ಸುರಕ್ಷಿತ ಹೂಡಿಕೆ ಬಗ್ಗೆ ಅನೇಕರು ತಲೆಕೆಡಿಸಿಕೊಳ್ತಾರೆ. ಯಾವುದು ಸುರಕ್ಷಿತ ಹಾಗೂ ಹೆಚ್ಚು ಲಾಭ ಸಿಗಲಿದೆ ಎಂಬ ಗೊಂದಲ ಅನೇಕರಲ್ಲಿರುತ್ತದೆ. ಉತ್ತಮ ಹೂಡಿಕೆ ವಿಷ್ಯಕ್ಕೆ ಬಂದಾಗ ಎಫ್ ಡಿ ಸುರಕ್ಷಿತ ಹೂಡಿಕೆ. ನೀವು ಎಫ್ಡಿ ಮಾಡುವ ಪ್ಲಾನ್ ನಲ್ಲಿದ್ದರೆ ಯಾವ ಯಾವ ಬ್ಯಾಂಕ್ ಎಷ್ಟು ಬಡ್ಡಿ ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇಕಡಾ 2.9 ರಿಂದ ಶೇಕಡಾ 5.4 ರವರೆಗೆ ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರ 7 ದಿನಗಳಿಂದ 10 ವರ್ಷಗಳವರೆಗಿನ ಎಫ್ ಡಿಗೆ ಶೇಕಡಾ 3.4 ರಿಂದ ಶೇಕಡಾ 6.2ರಷ್ಟು ಬಡ್ಡಿಯನ್ನು ನೀಡುತ್ತಿದೆ. ಈ ದರಗಳು ಜನವರಿ 8, 2021 ರಿಂದ ಅನ್ವಯವಾಗಿವೆ. 7 ದಿನದಿಂದ 45 ದಿನಗಳ ಎಫ್‌ಡಿಗಳಿಗೆ ಶೇಕಡಾ 2.9 ರಷ್ಟು ಬಡ್ಡಿ ಸಿಗುತ್ತದೆ. 46 ದಿನಗಳಿಂದ 179 ದಿನಗಳವರೆಗಿನ ಠೇವಣಿ ಮೇಲೆ ಶೇಕಡಾ 3.9ರಷ್ಟು ಬಡ್ಡಿ ನೀಡಲಾಗುವುದು. 180 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಇರುವ ಎಫ್‌ಡಿಗಳಿಗೆ ಶೇಕಡಾ 4.4 ರಷ್ಟು ಬಡ್ಡಿ ಸಿಗುತ್ತದೆ. 3 ವರ್ಷ ಮತ್ತು 5 ವರ್ಷದೊಳಗಿನ ಎಫ್‌ಡಿ ದರಗಳು ಶೇಕಡಾ 5.3 ಆಗಿರುತ್ತದೆ.
ಆಕ್ಸಿಸ್ ಬ್ಯಾಂಕ್ 7 ದಿನಗಳಿಂದ 29 ದಿನಗಳ ನಡುವೆ ಮುಕ್ತಾಯವಾಗುವ ಎಫ್‌ಡಿ ಮೇಲೆ ಶೇಕಡಾ 2.50ರಷ್ಟು ಬಡ್ಡಿಯನ್ನು ನೀಡುತ್ತಿದೆ. 30 ದಿನಗಳ 3 ತಿಂಗಳ ಎಫ್ ಡಿಗೆ ಶೇಕಡಾ 3ರಷ್ಟು ಬಡ್ಡಿ ನೀಡುತ್ತದೆ. 3 ತಿಂಗಳ ಮತ್ತು 6 ತಿಂಗಳಿಗಿಂತ ಕಡಿಮೆ ಎಫ್‌ಡಿಗಳಿಗೆ ಶೇಕಡಾ 3.5 ರಷ್ಟು ಬಡ್ಡಿ ನೀಡುತ್ತದೆ. 15 ತಿಂಗಳು ಮತ್ತು 18 ತಿಂಗಳ ಎಫ್‌ಡಿಗಳಿಗೆ ಶೇಕಡಾ 5.20ರಷ್ಟು ಬಡ್ಡಿ ನೀಡುತ್ತದೆ. 5 ರಿಂದ 10 ವರ್ಷಗಳಲ್ಲಿ ಪಕ್ವವಾಗುವ ಠೇವಣಿಯ ಮೇಲೆ ಶೇಕಡಾ 5.75 ರಷ್ಟು ಬಡ್ಡಿ ಸಿಗುತ್ತದೆ.
ಐಡಿಎಫ್‌ಸಿ ಬ್ಯಾಂಕ್ 7 ರಿಂದ 14 ದಿನಗಳ ಠೇವಣಿಗೆ ಶೇಕಡಾ 2.75 ರಷ್ಟು ಬಡ್ಡಿಯನ್ನು ಪಾವತಿಸುತ್ತಿದೆ. 45 ದಿನಗಳಿಂದ 90 ದಿನಗಳವರೆಗಿನ ಠೇವಣಿಗೆ ಶೇಕಡಾ 4ರಷ್ಟು ಬಡ್ಡಿ ನೀಡಲಾಗ್ತಿದೆ. 5 ವರ್ಷದಿಂದ 10 ವರ್ಷಗಳ ಎಫ್‌ಡಿ ಮೇಲೆ ಶೇಕಡಾ 5.75 ರಷ್ಟು ಬಡ್ಡಿ ನೀಡಲಾಗುತ್ತಿದೆ.
ಕೊಟಕ್ ಮಹೀಂದ್ರಾ ಬ್ಯಾಂಕ್ 7 ದಿನಗಳಿಂದ 30 ದಿನಗಳವರೆಗಿನ ಎಫ್‌ಡಿ ಮೇಲೆ ಶೇಕಡಾ 2.5 ರಷ್ಟು ಬಡ್ಡಿ ನೀಡ್ತಿದೆ. 31 ದಿನಗಳಿಂದ 90 ದಿನಗಳ ಎಫ್‌ಡಿಗೆ ಶೇಕಡಾ 2.75ರಷ್ಟು ಬಡ್ಡಿ ಸಿಗ್ತಿದೆ. 91 ದಿನಗಳಿಂದ 120 ದಿನಗಳವರೆಗಿನ ಎಫ್‌ಡಿ ಮೇಲೆ ಶೇಕಡಾ 3ರಷ್ಟು ಬಡ್ಡಿ ಸಿಗ್ತಿದೆ. 5 ರಿಂದ 10 ವರ್ಷಗಳವರೆಗಿನ ಎಫ್‌ಡಿ ಮೇಲೆ ಶೇಕಡಾ 5.30ರಷ್ಟು ಬಡ್ಡಿ ನೀಡಲಾಗ್ತಿದೆ.