ನಿಮ್ಮ ಯಾವುದೇ ಬ್ಯಾಂಕಿಂಗ್ ಕೆಲಸಗಳಿದ್ದರೆ ಇವತ್ತೇ ಮುಗಿಸಿಕೊಳ್ಳಿ. 4 ದಿನ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಶುಕ್ರವಾರವೇ ನಿಮ್ಮ ಬ್ಯಾಂಕಿಂಗ್ ಕೆಲಸಗಳನ್ನು ಮುಗಿಸಿಕೊಳ್ಳುವುದು ಒಳ್ಳೆಯದು. ಮಂಗಳವಾರದವರೆಗೆ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಮಾರ್ಚ್ 15 ಮತ್ತು 16 ರಂದು ಮುಷ್ಕರಕ್ಕೆ ಕರೆ ನೀಡಿದೆ.
ದೇಶವ್ಯಾಪಿ ಮುಷ್ಕರ ನಡೆಯುವುದರಿಂದ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ಮಾರ್ಚ್ 13 ಎರಡನೇ ಶನಿವಾರ, ಮಾರ್ಚ್ 14 ಭಾನುವಾರ, ಮಾರ್ಚ್ 15 ಮತ್ತು 16 ರಂದು ನೌಕರರ ಮುಷ್ಕರ ಇರುವ ಕಾರಣ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದೆ.