ನವದೆಹಲಿ: ಬ್ಯಾಂಕ್ ಮುಳುಗಿದರೆ, ದಿವಾಳಿಯಾದ್ರೆ ಗ್ರಾಹಕರಿಗೆ 5 ಲಕ್ಷ ರೂ. ನೀಡುವ ಮಸೂದೆಗೆ ಸಂಸತ್ತಿನಲ್ಲಿ ಅನುಮೋದನೆ ದೊರೆತಿದೆ.
ಯಾವುದೇ ಬ್ಯಾಂಕುಗಳು ದಿವಾಳಿಯಾದ ಸಂದರ್ಭದಲ್ಲಿ ಅಂತಹ ಬ್ಯಾಂಕುಗಳಲ್ಲಿ ಗ್ರಾಹಕರು ಹೂಡಿಕೆ ಮಾಡಿದ ಹಣದಲ್ಲಿ ಗರಿಷ್ಠ 5 ಲಕ್ಷ ರೂ. ಒದಗಿಸುವ ಮಸೂದೆಗೆ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರ ದೊರೆತಿದ್ದು ರಾಷ್ಟ್ರಪತಿಗಳು ಅಂಕಿತ ಹಾಕಿದ್ದಲ್ಲಿ ಕಾಯ್ದೆಯಾಗಿ ಜಾರಿಯಾಗಲಿದೆ.
ಠೇವಣಿದಾರರ ಹಿತಕಾಯುವ ವಿಧೇಯಕಕ್ಕೆ ಸಂಸತ್ತು ಅಸ್ತು ಎಂದಿದೆ. ಬ್ಯಾಂಕ್ ಮುಚ್ಚಿದ ಸಂದರ್ಭದಲ್ಲಿ ಠೇವಣಿ ಹಣ ಗ್ರಾಹಕರಿಗೆ ಒದಗಿಸಲು ಡಿಪಾಸಿಟ್ ಇನ್ಸೂರೆನ್ಸ್ ಗ್ಯಾರಂಟಿ ಕಾರ್ಪೋರೇಷನ್ ಮಸೂದೆಗೆ ಒಪ್ಪಿಗೆ ನೀಡಲಾಗಿದೆ. ಒಂದು ವೇಳೆ ಗ್ರಾಹಕರು ಹೂಡಿಕೆ ಮಾಡಿದ ಬ್ಯಾಂಕ್ ಮುಚ್ಚಿದರೆ 90 ದಿನಗಳ ಒಳಗೆ ಗರಿಷ್ಠ 5 ಲಕ್ಷ ರೂಪಾಯಿವರೆಗೆ ಗ್ರಾಹಕರಿಗೆ ಹಣ ಒದಗಿಸಲಾಗುವುದು.