ಕೊರೊನಾ ವೈರಸ್ ರೋಗದಿಂದ ಗ್ರಾಹಕರನ್ನು ರಕ್ಷಿಸುವ ಸಲುವಾಗಿ ಬ್ಯಾಂಕ್ ಗಳು ಸಜ್ಜುಗೊಂಡಿದೆ. ಶೀಘ್ರದಲ್ಲೇ ದೇಶದ ಅನೇಕ ದೊಡ್ಡ ಬ್ಯಾಂಕುಗಳು ವಿಶಿಷ್ಟ್ಯ ಎಟಿಎಂ ಯಂತ್ರವನ್ನು ಸ್ಥಾಪಿಸಲು ತಯಾರಿ ನಡೆಸುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ, ಎಟಿಎಂ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುವ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಕಂಪನಿಯು ಹೊಸ ಯಂತ್ರವನ್ನು ವಿನ್ಯಾಸಗೊಳಿಸಿದೆ. ಇದರಲ್ಲಿ ನಿಮ್ಮ ಮೊಬೈಲ್ ಅಪ್ಲಿಕೇಶನ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಡೆಯಬಹುದು.
ಮ್ಯಾಗ್ನೆಟಿಕ್ ಸ್ಟ್ರೈಪ್ ಸಂಪೂರ್ಣ ಗ್ರಾಹಕ ಡೇಟಾವನ್ನು ಒಳಗೊಂಡಿರುತ್ತವೆ. ಈ ಎಟಿಎಂ ಯಂತ್ರವು ಪಿನ್ ಸಂಖ್ಯೆಯನ್ನು ನಮೂದಿಸಿದ ನಂತರ ಡೇಟಾವನ್ನು ಪರಿಶೀಲಿಸುತ್ತದೆ. ಇದರ ನಂತರ ಗ್ರಾಹಕರಿಗೆ ಹಣವನ್ನು ಹಿಂಪಡೆಯಲು ಅವಕಾಶವಿದೆ. ಈ ಯಂತ್ರಗಳಲ್ಲಿ ಗ್ರಾಹಕರು ಎಟಿಎಂ ಯಂತ್ರವನ್ನು ಸ್ಪರ್ಶಿಸುವುದಿಲ್ಲ. ಗ್ರಾಹಕರು ಏನನ್ನೂ ಮುಟ್ಟದೆ ತಮ್ಮ ಮೊಬೈಲ್ ಫೋನ್‌ಗಳ ಮೂಲಕ ಹಣವನ್ನು ಹಿಂಪಡೆಯಬಹುದು.
ಎಟಿಎಂ ಯಂತ್ರದಲ್ಲಿ ನೀಡಲಾದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ. ನಂತರ ಆ ಮೊತ್ತವನ್ನು ನಿಮ್ಮ ಮೊಬೈಲ್‌ನಲ್ಲಿ ನಮೂದಿಸಬೇಕಾಗುತ್ತದೆ. ನಂತ್ರ ನಗದನ್ನು ಎಟಿಎಂನಿಂದ ಪಡೆಯಬಹುದು.