alex Certify ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಆಗಸ್ಟ್ 1 ರಿಂದ ಸೇವಾ ಶುಲ್ಕ ಸೇರಿ ಹಲವು ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಆಗಸ್ಟ್ 1 ರಿಂದ ಸೇವಾ ಶುಲ್ಕ ಸೇರಿ ಹಲವು ಬದಲಾವಣೆ

ನವದೆಹಲಿ: ಹಣಕಾಸು ಕ್ಷೇತ್ರದ ಕೆಲವು ನಿಯಮಗಳು ಬದಲಾವಣೆಯಾಗಿದ್ದು ಆಗಸ್ಟ್ 1 ರಿಂದ NACH ಸೇವೆ ವಾರದ ಎಲ್ಲಾ ಸಮಯದಲ್ಲಿಯೂ ಲಭ್ಯವಿರುತ್ತದೆ. ಒಂದೇ ಸಲಕ್ಕೆ ಎಲ್ಲರಿಗೂ ಹಣ ವರ್ಗಾವಣೆ ಮಾಡುವ ವ್ಯವಸ್ಥೆ ಇದಾಗಿದ್ದು, ವೇತನ ಪಿಂಚಣಿ ಮೊದಲಾದ ಸಗಟು ಪಾವತಿಗೆ ಈ ವ್ಯವಸ್ಥೆ ಸಹಕಾರಿಯಾಗಿದೆ.

ಇದರೊಂದಿಗೆ ಫೋನ್, ಗ್ಯಾಸ್, ವಿದ್ಯುತ್, ನೀರು ಶುಲ್ಕ, ವಿಮೆ ಪ್ರೀಮಿಯಂ ಮೊದಲಾದವುಗಳ ಪಾವತಿಗೆ ಅನುಕೂಲ ಕಲ್ಪಿಸಲಾಗುವುದು ಎನ್ನಲಾಗಿದೆ.

ಐಸಿಐಸಿಐ ಬ್ಯಾಂಕ್ ಸೇವಾ ಶುಲ್ಕಗಳನ್ನು ಆಗಸ್ಟ್ 1 ರಿಂದ ಪರಿಷ್ಕರಿಸಲಿದ್ದು ಒಂದು ತಿಂಗಳಲ್ಲಿ ನಾಲ್ಕು ಬಾರಿ ಮಾತ್ರ ಉಚಿತವಾಗಿ ವಹಿವಾಟು ನಡೆಸಲು ಅವಕಾಶವಿರುತ್ತದೆ. ನಂತರದ ಪ್ರತಿ ವಹಿವಾಟಿಗೆ 150 ರೂ. ಶುಲ್ಕ ಪಾವತಿಸಬೇಕು. ಠೇವಣಿ ಮತ್ತು ವಿತ್ ಡ್ರಾ ಒಟ್ಟು ಮೊತ್ತಕ್ಕೆ ಮಿತಿ ನಿಗದಿ ಮಾಡಲಾಗಿದೆ.

ಆಗಸ್ಟ್ 1 ರಿಂದ ಎಟಿಎಂ ಸೇವಾ ಶುಲ್ಕ ದುಬಾರಿಯಾಗಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 9 ವರ್ಷಗಳ ನಂತರ ಎಟಿಎಂ ಸೇವಾ ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡಿದ್ದು, ಎಟಿಎಂ ಇಂಟರ್ ಚೇಂಜ್ ಶುಲ್ಕ ಪ್ರತಿ ವಹಿವಾಟಿಗೆ 15 ರೂಪಾಯಿಯಿಂದ 17 ರೂಪಾಯಿಗೆ ಏರಿಕೆಯಾಗಲಿದೆ. ಹಣಕಾಸೇತರ ವಹಿವಾಟಿನ ಶುಲ್ಕ 5 ರಿಂದ 6 ರೂಪಾಯಿಗೆ ಹೆಚ್ಚಾಗಲಿದೆ.

ಒಂದು ಬ್ಯಾಂಕಿನ ಕಾರ್ಡನ್ನು ಇನ್ನೊಂದು ಬ್ಯಾಂಕಿನ ಎಟಿಎಂನಲ್ಲಿ ಬಳಕೆ ಮಾಡಿದ ಸಂದರ್ಭದಲ್ಲಿ ಈ ಶುಲ್ಕ ವಿಧಿಸಲಾಗುತ್ತದೆ. ಬ್ಯಾಂಕುಗಳು ಈ ಶುಲ್ಕವನ್ನು ಪಾವತಿಸುತ್ತವೆ. ಗ್ರಾಹಕರಿಗೆ ನಿಗದಿತ ಸಂಖ್ಯೆಯ ಉಚಿತ ವಹಿವಾಟು ನಡೆಸಲು ಅವಕಾಶವಿದೆ. ಇದರ ನಂತರ ಪ್ರತಿ ವಹಿವಾಟಿಗೆ 20 ರೂಪಾಯಿಯನ್ನು ಬ್ಯಾಂಕಿಗೆ ಪಾವತಿಸಬೇಕಾಗುತ್ತದೆ. ಈ ಶುಲ್ಕ ಈಗ 21 ರೂಪಾಯಿ ಆಗಲಿದ್ದು, ಜನವರಿ 1, 2022 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...