alex Certify Bank Alerts…! ಜುಲೈನಲ್ಲಿ ಬರೋಬ್ಬರಿ 15 ದಿನ ಬ್ಯಾಂಕ್ ರಜೆ, ಮೊದಲೇ ಪ್ಲಾನ್ ಮಾಡಿಕೊಳ್ಳಿ –ಇಲ್ಲಿದೆ ರಜೆ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Bank Alerts…! ಜುಲೈನಲ್ಲಿ ಬರೋಬ್ಬರಿ 15 ದಿನ ಬ್ಯಾಂಕ್ ರಜೆ, ಮೊದಲೇ ಪ್ಲಾನ್ ಮಾಡಿಕೊಳ್ಳಿ –ಇಲ್ಲಿದೆ ರಜೆ ಪಟ್ಟಿ

ನವದೆಹಲಿ: ಜುಲೈ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನಗಳವರೆಗೆ ರಜೆ ಇರಲಿದೆ. ಮುಂದಿನ ವಾರ ನೀವು ಯಾವುದೇ ಬ್ಯಾಂಕ್ ಸಂಬಂಧಿತ ಕೆಲಸವನ್ನು ಹೊಂದಿದ್ದರೆ, ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಬ್ಯಾಂಕಿನ ಕೆಲಸವನ್ನು ಪೂರ್ಣಗೊಳಿಸಿ. ಇಲ್ಲದಿದ್ದರೆ, ನಿಮ್ಮ ಹಣಕಾಸಿನ ವ್ಯವಹಾರಗಳಿಗೆ ತೊಂದರೆಯಾದೀತು.

ಜುಲೈನಲ್ಲಿ 15 ದಿನಗಳವರೆಗೆ ಬ್ಯಾಂಕು ಬಂದ್

ರಿಸರ್ವ್ ಬ್ಯಾಂಕ್ ಆಫ್ ಹಾಲಿಡೇ ಕ್ಯಾಲೆಂಡರ್ ಪ್ರಕಾರ, ಜುಲೈನಲ್ಲಿ 4 ಭಾನುವಾರ, 2 ಮತ್ತು 4 ನೇ ಶನಿವಾರ ಸೇರಿ 6 ದಿನಗಳಲ್ಲಿ ಬ್ಯಾಂಕುಗಳ ಸಾಪ್ತಾಹಿಕ ರಜಾದಿನಗಳು ಇರಲಿದೆ. ಇದರೊಂದಿಗೆ ಇನ್ನೂ 9 ದಿನಗಳವರೆಗೆ ಬ್ಯಾಂಕ್ ಗಳಿಗೆ ರಜೆ ಇರಲಿದೆ. ಈ ಇತರ ರಜಾದಿನಗಳು ದೇಶಾದ್ಯಂತ ಒಟ್ಟಿಗೆ ಇರುವುದಿಲ್ಲ. ಆಯಾ ಸ್ಥಳ, ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಹೀಗಾಗಿ, ಬ್ಯಾಂಕುಗಳು ಒಟ್ಟು 15 ದಿನಗಳವರೆಗೆ ಕಾರ್ಯನಿರ್ವಹಿಸುವುದಿಲ್ಲ.

ಜುಲೈನಲ್ಲಿ ಬ್ಯಾಂಕಿನ ವಾರ್ಷಿಕ ರಜೆ:

ಜುಲೈ 4 – ಭಾನುವಾರ.

ಜುಲೈ 10 – ತಿಂಗಳ ಎರಡನೇ ಶನಿವಾರ.

ಜುಲೈ 11 – ಭಾನುವಾರ.

ಜುಲೈ 18 – ಭಾನುವಾರ.

ಜುಲೈ 24 – ತಿಂಗಳ ನಾಲ್ಕನೇ ಶನಿವಾರ.

ಜುಲೈ 25 – ಭಾನುವಾರ.

ಜುಲೈ 2021 ರಲ್ಲಿ ಬ್ಯಾಂಕ್ ರಜಾದಿನಗಳು:

ಜುಲೈ 12 – ಕಾಂಗ್ (ರಥಜಾತ್ರ) / ರಥಯಾತ್ರೆ – ಭುವನೇಶ್ವರ ಮತ್ತು ಇಂಫಾಲ್.

ಜುಲೈ 13 – ಭಾನು ಜಯಂತಿ – ಗ್ಯಾಂಗ್ಟಾಕ್.

ಜುಲೈ 14 – ದ್ರುಪಕ ಜಯಂತಿ – ಗ್ಯಾಂಗ್ಟಾಕ್.

ಜುಲೈ 16 – ಹರೆಲ್- ಡೆಹ್ರಾಡೂನ್.

ಜುಲೈ 17 – ಯು ತಿರೋತ್ ಸಿಂಗ್ ಡೇ / ಖಾರ್ಚಿ ಪೂಜಾ – ಅಗರ್ತಲಾ / ಶಿಲ್ಲಾಂಗ್.

ಜುಲೈ 19 – ಗುರು ರಿನ್‌ಪೋಚೆ ಅವರ ತುಂಗ್ಕರ್ ಶೆಚು-ಗ್ಯಾಂಗ್ಟಾಕ್.

ಜುಲೈ 20 – ಬಕ್ರಿದ್ – ಜಮ್ಮು, ಕೊಚ್ಚಿ, ಶ್ರೀನಗರ, ಮತ್ತು ತಿರುವನಂತಪುರಂ.

ಜುಲೈ 21 – ಬಕ್ರಿದ್ (ಇಡ್-ಉಲ್-ಜುಹಾ) – ಐಜಾಲ್, ಭುವನೇಶ್ವರ, ಗ್ಯಾಂಗ್ಟಾಕ್, ಕೊಚ್ಚಿ ಮತ್ತು ತಿರುವನಂತಪುರಂ ಹೊರತುಪಡಿಸಿ ಎಲ್ಲಾ ಸ್ಥಳಗಳಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ.

ಜುಲೈ 31 – ಕೆರ್ ಪೂಜಾ – ಅಗರ್ತಲಾ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...