ಕನಿಷ್ಠ ಬ್ಯಾಲೆನ್ಸ್ ಮತ್ತು ಎಸ್ಎಂಎಸ್ ಶುಲ್ಕವನ್ನು ಆಕ್ಸಿಸ್ ಬ್ಯಾಂಕ್ ಹೆಚ್ಚಳ ಮಾಡಿದೆ. ಹಾಗಾಗಿ ಆಕ್ಸಿಸ್ ಬ್ಯಾಂಕ್ ಗ್ರಾಹಕರಾಗಿದ್ದರೆ ನಿಮಗಾಗಿ ಶಾಕಿಂಗ್ ಸುದ್ದಿ ಇದೆ.
ಕನಿಷ್ಠ ಬ್ಯಾಲೆನ್ಸ್ ಮತ್ತು ಎಸ್ಎಂಎಸ್ ಶುಲ್ಕ ಹೆಚ್ಚಳ ಮಾಡಲಾಗಿದೆ. ಉಳಿತಾಯ ಖಾತೆ ಹೊಂದಿರುವ ಗ್ರಾಹಕರ ಅನೇಕ ಶುಲ್ಕಗಳನ್ನು ಹೆಚ್ಚಳ ಮಾಡಲಾಗಿದ್ದು, ಮೇ 1 ರಿಂದ ಪರಿಷ್ಕೃತ ಶುಲ್ಕಗಳು ಜಾರಿಗೆ ಬರಲಿವೆ. ಆಕ್ಸಿಸ್ ಬ್ಯಾಂಕ್ ಗ್ರಾಹಕರು ಮಾಸಿಕ ಸರಾಸರಿ 10 ರಿಂದ 15 ಸಾವಿರ ರೂ.ಗೆ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳಬೇಕು. ಪ್ರೈಮ್ ಮತ್ತು ಲಿಬರ್ಟಿ ಬ್ರಾಂಡ್ ಉಳಿತಾಯ ಖಾತೆದಾರರು 25,000 ರೂ. ಉಳಿಸಿಕೊಳ್ಳಬೇಕಾಗುತ್ತದೆ. ಈ ಮಿತಿ ಕಾಯ್ದುಕೊಳ್ಳುವಲ್ಲಿ ವಿಫಲವಾದ ಗ್ರಾಹಕರಿಗೆ 100 ರೂಪಾಯಿಗೆ 10 ರೂ. ದಂಡವಾಗಿ ವಿಧಿಸಲಾಗುತ್ತದೆ.
ಕನಿಷ್ಠ ಶುಲ್ಕವನ್ನು 50 ರೂ.ಗೆ ಇಳಿಸಲಾಗಿದೆ. ಗರಿಷ್ಠ ಶುಲ್ಕವನ್ನು ಈಗಿರುವ 600 ರೂ.ನಿಂದ 800 ರೂ.ಗೆ ಹೆಚ್ಚಿಸಲಾಗಿದೆ. ನಿಮ್ಮ ಸರಾಸರಿ ಬಾಕಿ ಮೊತ್ತ 7500 ರೂಪಾಯಿಗಿಂತ ಕಡಿಮೆ ಇದ್ದರೆ ಬ್ಯಾಂಕ್ 800 ರೂಪಾಯಿ ಶುಲ್ಕದ ಜೊತೆಗೆ ತೆರಿಗೆ ವಿಧಿಸುತ್ತದೆ.
ವಾಪಸಾತಿ ಶುಲ್ಕಗಳಿಗೆ ಸಂಬಂಧಿಸಿದಂತೆ ಆಕ್ಸಿಸ್ ಬ್ಯಾಂಕ್ ತಿಂಗಳಿಗೆ 4 ಉಚಿತ ವಹಿವಾಟಿನ ನಂತರ ಅಥವಾ ಎರಡು ಲಕ್ಷ ರೂಪಾಯಿ ಹಣ ಹಿಂಪಡೆದ ನಂತರ ಪ್ರತಿ 1000 ರೂಪಾಯಿಗೆ 5 ರೂಪಾಯಿ ಶುಲ್ಕ ಪಾವತಿಸಬೇಕಿದೆ.
ನಗದು ಹಿಂಪಡೆಯಲು HDFC ಬ್ಯಾಂಕ್, ICICI ಬ್ಯಾಂಕ್ ಶುಲ್ಕ ಹೆಚ್ಚಳ ಮಾಡಲಾಗಿದೆ. ಆಕ್ಸಿಸ್ ಬ್ಯಾಂಕ್ ಎಸ್ಎಂಎಸ್ ಶುಲ್ಕವನ್ನು ಹೆಚ್ಚಳ ಮಾಡಿದ್ದು, ಪ್ರತಿ ಎಸ್ಎಂಎಸ್ ಅಲರ್ಟ್ ಗೆ 25 ಪೈಸೆ ವಿಧಿಸುತ್ತದೆ. ಪ್ರಸ್ತುತ ತಿಂಗಳಿಗೆ ಇರುವ 5 ರೂ. ಬದಲಿಗೆ ಗರಿಷ್ಠ 25 ರೂಪಾಯಿ ಶುಲ್ಕ ವಿಧಿಸಲಾಗುವುದು. ಜುಲೈ 1 ರಿಂದ ನಿಯಮ ಜಾರಿಗೆ ಬರಲಿದೆ. ಒನ್ ಟೈಮ್ ಪಾಸ್ ವರ್ಡ್ ಮತ್ತು ವಹಿವಾಟಿನ ಒಟಿಪಿಗಳಿಗೂ ಬ್ಯಾಂಕ್ ಶುಲ್ಕ ಹೆಚ್ಚಳ ಮಾಡಲಾಗಿದೆ.