ಕೊರೊನಾ ಬಿಕ್ಕಟ್ಟಿನ ಮಧ್ಯೆ ಬ್ಯಾಂಕ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ವಂಚಕರು ಈಗ ಹೊಸ ಮಾರ್ಗವನ್ನು ಕಂಡು ಹಿಡಿದಿದ್ದಾರೆ. ಕೊರೊನಾ ಹೆಸರಿನಲ್ಲಿಯೇ ಜನರ ಖಾತೆ ಖಾಲಿ ಮಾಡ್ತಿದ್ದಾರೆ. ಯಸ್, ಉಚಿತವಾಗಿ ಕೊರೊನಾ ಟೆಸ್ಟ್ ಮಾಡಲಾಗುವುದು ಎಂಬ ಸಂದೇಶ ಬಂದಲ್ಲಿ ಜಾಗರೂಕರಾಗಿರಿ. ಯಾಕೆಂದ್ರೆ ಫ್ರೀ ಹೆಸರಿನಲ್ಲಿ ನಿಮ್ಮ ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರ್ ಹ್ಯಾಕ್ ಮಾಡುವ ಮೂಲಕ ವಂಚಕರು ಮೋಸ ಮಾಡ್ತಿದ್ದಾರೆ.
ಇ-ಮೇಲ್ ನಲ್ಲಿ ಮೊದಲು ಉಚಿತ ಕೊರೊನಾ ಪರೀಕ್ಷೆ ಸಂದೇಶ ಕಳುಹಿಸಲಾಗುತ್ತದೆ. ನಂತ್ರ ಡಿಟೇಲ್ ಕೇಳಲಾಗುತ್ತದೆ. ಮಾಹಿತಿ ನೀಡುವಂತೆ ಕೇಳಲಾಗುತ್ತದೆ. ಜನರು ತಮ್ಮ ಬಗ್ಗೆ ಮಾಹಿತಿ ನೀಡ್ತಿದ್ದಂತೆ ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರ್ ಹ್ಯಾಕ್ ಮಾಡಲಾಗುತ್ತದೆ. ಉಚಿತ ಪರೀಕ್ಷೆ ಆಸೆಗೆ ಬ್ಯಾಂಕ್ ಮಾಹಿತಿಯನ್ನು ನೀಡಿದ್ರೆ ಖಾತೆ ಖಾಲಿಯಾದಂತೆ.
ಈ ಬಗ್ಗೆ ಭಾರತೀಯ ಬ್ಯಾಂಕುಗಳು ಈಗಾಗಲೇ ತಮ್ಮ ಗ್ರಾಹಕರನ್ನು ಎಚ್ಚರಿಸಿವೆ. ಈಗ ವಿದೇಶಿ ಬ್ಯಾಂಕುಗಳು ಸಹ ಈ ಬಗ್ಗೆ ತಮ್ಮ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಿವೆ. ncov2019@gov.in ಇಂತ ಮೇಲ್ ಐಡಿಯಿಂದ ಸಂದೇಶ ಬರುವ ಸಾಧ್ಯತೆಯಿದೆ. ಉಚಿತ ಕೊರೊನಾ ಪರೀಕ್ಷೆ ಎಂದು ಅಲ್ಲಿ ಬರೆದಿರುತ್ತದೆ. ಅದ್ರ ಮೇಲೆ ನೀವು ಕ್ಲಿಕ್ ಮಾಡಿದ ನಂತ್ರ ಮಾಹಿತಿ ಕೇಳಲಾಗುತ್ತದೆ. ಮಾಹಿತಿ ನೀಡಿದ್ರೆ ಹ್ಯಾಕರ್ ಕೆಲಸ ಸುಲಭವಾದಂತೆ.