ನವದೆಹಲಿ: 2027 ರ ವೇಳೆಗೆ ಡೀಸೆಲ್ ಚಾಲಿತ ನಾಲ್ಕು ಚಕ್ರ ವಾಹನಗಳನ್ನು ನಿಷೇಧಿಸಲು ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ. 2027ಕ್ಕೆ ಡೀಸೆಲ್ ಕಾರ್, ಜೀಪ್ ನಿಷೇಧವಾಗುವ ಸಾಧ್ಯತೆ ಇದೆ. ಉನ್ನತ ಮಟ್ಟದ ಸಮಿತಿಯೊಂದು ಈ ಕುರಿತಾಗಿ ಪೆಟ್ರೋಲಿಯಂ ಸಚಿವರಿಗೆ ಶಿಫಾರಸು ಮಾಡಿದೆ.
10 ಲಕ್ಷ ಜನಸಂಖ್ಯೆ ಇರುವ ನಗರಗಳಲ್ಲಿ ಇದು ಜಾರಿಯಾಗುವ ಸಾಧ್ಯತೆ ಇದೆ. 2027ರ ವೇಳೆಗೆ 10 ಲಕ್ಷ ಜನಸಂಖ್ಯೆಗಿಂತ ಹೆಚ್ಚಿನ ಬೃಹತ್ ಮತ್ತು ಹೆಚ್ಚು ಮಾಲಿನ್ಯಕಾರಕ ನಗರಗಳಲ್ಲಿ ಡೀಸೆಲ್ ಚಾಲಿತ ನಾಲ್ಕು ಚಕ್ರವಾಹನ ಬಳಕೆ ನಿಷೇಧಿಸಿ ಎಲೆಕ್ಟ್ರಿಕ್ ಮತ್ತು ಅನಿಲ ಇಂಧನ ಆಧರಿತ ವಾಹನ ಬಳಕೆಗೆ ಅನುಮತಿ ನೀಡಬೇಕೆಂದು ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿದೆ.
ಇಂಧನ ಇಲಾಖೆ ಮಾಜಿ ಕಾರ್ಯದರ್ಶಿ ತರುಣ್ ಕಪೂರ್ ನೇತೃತ್ವದ ಇಂಧನ ಪರಿವರ್ತನೆ ಸಲಹಾ ಸಮಿತಿ ವತಿಯಿಂದ ಪೆಟ್ರೋಲಿಯಂ ಸಚಿವಾಲಯಕ್ಕೆ ಸಲ್ಲಿಸಲಾದ ವರದಿಯಲ್ಲಿ ಈ ಕುರಿತು ಶಿಫಾರಸು ಮಾಡಲಾಗಿದೆ. ಹಂತ ಹಂತವಾಗಿ ಡೀಸೆಲ್ ಮತ್ತು ಪೆಟ್ರೋಲ್ ಬಳಕೆಯನ್ನು ಹೇಗೆ ಕಡಿಮೆ ಮಾಡಬೇಕು ಎಂಬುದರ ಕುರಿತು ವರದಿಯಲ್ಲಿ ಹೇಳಲಾಗಿದ್ದು, 2027ರ ವೇಳೆಗೆ ಡೀಸೆಲ್ ಕಾರ್, ಜೀಪ್ ಬಳಕೆ ನಿಷೇಧಿಸಲು ತಿಳಿಸಲಾಗಿದೆ.