ಬಾಗಲಕೋಟೆ: ಕೊರೋನಾ ಕಾರಣದಿಂದಾಗಿ ಬ್ಯಾಂಕ್ ವ್ಯವಹಾರದ ವೇಳೆಯನ್ನು ಜೂನ್ 7 ರ ವರೆಗೆ ಬದಲಿಸಲಾಗಿದೆ.
ಕೋವಿಡ್ 2 ನೇ ಅಲೆ ಮುನ್ನಚ್ಚರಿಕೆ ಕ್ರಮವಾಗಿ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಮೇ 26 ರಿಂದ ಜಾರಿಗೆ ಬರುವಂತೆ ಜೂನ್ 7 ರ ವರೆಗೆ ಬ್ಯಾಂಕ್ ಹಾಗೂ ಭಾರತೀಯ ವಿಮಾ ಯೋಜನೆಯ ವ್ಯವಹಾರಗಳನ್ನು ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ಅವರು ಡಿಜಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್ 2005 ಸೆಕ್ಷನ್ 24 ಹಾಗೂ ಸಿ.ಆರ್.ಪಿ.ಸಿ. ಸೆಕ್ಷನ್ 144 ರಡಿಯಲ್ಲಿ ಆದೇಶ ಹೊರಡಿಸಿದ್ದಾರೆ.