ನವದೆಹಲಿ: ವಿಪ್ರೋ ಕಂಪನಿಯ ಅಜೀಂ ಪ್ರೇಮ್ ಜೀ ಅವರು ದಿನಕ್ಕೆ 22 ಕೋಟಿ ರೂಪಾಯಿ ದಾನ ಮಾಡಿದ್ದಾರೆ. 2019 -20 ನೇ ಸಾಲಿನಲ್ಲಿ ಅಜೀಂ ಪ್ರೇಮ್ ಜೀ ದಾನ ಮಾಡಿದವರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದು, ಕೊಡುಗೈ ದಾನಿಯಾಗಿದ್ದಾರೆ.
2020ರಲ್ಲಿ ಅವರು 7904 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ರೋಹಿಣಿ ನೀಲೇಕಣಿ 47 ಕೋಟಿ ರೂಪಾಯಿ, ಇನ್ಫೋಸಿಸ್ ಸಹಸಂಸ್ಥಾಪಕ ನಂದನ್ ನಿಲೇಕಣಿ 159 ಕೋಟಿ ರೂಪಾಯಿ, ಎಸ್. ಗೋಪಾಲಕೃಷ್ಣನ್ 50 ಕೋಟಿ ರೂಪಾಯಿ, ಎಸ್.ಡಿ. ಶಿಬುಲಾಲ್ 32 ಕೋಟಿ ರೂಪಾಯಿ ದಾನ ನೀಡಿದ್ದಾರೆ.
ಅಜೀಂ ಪ್ರೇಮ್ ಜೀ ಪ್ರತಿಷ್ಠಾನ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ 1125 ಕೋಟಿ ರೂ. ದೇಣಿಗೆ ನೀಡಿದೆ. ಮುಕೇಶ್ ಅಂಬಾನಿ 458 ಕೋಟಿ ರೂಪಾಯಿ ನೀಡಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಕೋವಿಡ್ ಪರಿಹಾರವಾಗಿ 500 ಕೋಟಿ ರೂಪಾಯಿಯನ್ನು ಪಿಎಂ ಕೇರ್ಸ್ ಪರಿಹಾರ ನಿಧಿಗೆ ಹಾಗೂ 5 ಕೋಟಿ ರೂಪಾಯಿಯನ್ನು ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗೆ ನೀಡಿದೆ.
ಅದೇ ರೀತಿ ಕುಮಾರ ಮಂಗಲಂ ಬಿರ್ಲಾ ಅವರ ಕುಟುಂಬ 276 ಕೋಟಿ ರೂಪಾಯಿ ದೇಣಿಗೆ ನೀಡಿದೆ. ವೇದಾಂತ್ ಕಂಪನಿಯ ಅನಿಲ್ ಅಗರವಾಲ್ 215 ಕೋಟಿ ರೂಪಾಯಿ ದೇಣಿಗೆ ನೀಡಿದೆ ಎಂದು ಹೇಳಲಾಗಿದೆ.