ವಿಮಾನಗಳ ಭದ್ರತಾ ಶುಲ್ಕವನ್ನು ಹೆಚ್ಚಿಸಲು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನಗಳಲ್ಲಿ ವಿಮಾನಯಾನ ಭದ್ರತಾ ಶುಲ್ಕವನ್ನು ಹೆಚ್ಚಿಸಲಾಗುವುದು. ಇದು ವಿಮಾನ ಪ್ರಯಾಣಿಕರ ಜೇಬಿಗೆ ಸ್ವಲ್ಪ ಕತ್ತರಿ ಹಾಕಲಿದೆ.
ಇದ್ರಿಂದಾಗಿ ಸೆಪ್ಟೆಂಬರ್ 1 ರಿಂದ ವಿಮಾನ ದರಗಳು ದುಬಾರಿಯಾಗುವ ಸಾಧ್ಯತೆಯಿದೆ. ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ದೇಶೀಯ ವಿಮಾನಗಳಲ್ಲಿನ ವಾಯುಯಾನ ಭದ್ರತಾ ಶುಲ್ಕವು ಇನ್ಮುಂದೆ 160 ರೂಪಾಯಿಯಾಗಲಿದೆ. ಅಂತರರಾಷ್ಟ್ರೀಯ ವಿಮಾನಗಳ ಭದ್ರತಾ ಶುಲ್ಕ ದರ 5.2 ಡಾಲರ್ ಆಗಲಿದೆ.
ವಿಮಾನಯಾನವು ಟಿಕೆಟ್ ಬುಕಿಂಗ್ ಸಮಯದಲ್ಲಿ ವಾಯುಯಾನ ಭದ್ರತಾ ಶುಲ್ಕವನ್ನು ಪ್ರಯಾಣಿಕರಿಂದ ಪಡೆಯುತ್ತದೆ. ಇದನ್ನು ಸರ್ಕಾರಕ್ಕೆ ರವಾನಿಸುತ್ತದೆ. ದೇಶಾದ್ಯಂತ ವಿಮಾನ ನಿಲ್ದಾಣಗಳನ್ನು ರಕ್ಷಿಸಲು ವಿಮಾನಯಾನ ಭದ್ರತಾ ಶುಲ್ಕವನ್ನು ಬಳಸಲಾಗುತ್ತದೆ. ಕಳೆದ ವರ್ಷ ವಾಯುಯಾನ ಸಚಿವಾಲಯವೂ ಈ ಶುಲ್ಕವನ್ನು ಹೆಚ್ಚಿಸಿತ್ತು. 2019 ರ ಜೂನ್ 7 ರಂದು ದೇಶೀಯ ಪ್ರಯಾಣಿಕರು ವಿಮಾನಯಾನ ಭದ್ರತಾ ಶುಲ್ಕವಾಗಿ 130 ರೂಪಾಯಿ ಬದಲು 150 ರೂಪಾಯಿ ಪಾವತಿಸಬೇಕಾಗಿತ್ತು.