ಎಲ್.ಪಿ.ಜಿ. ಸಿಲಿಂಡರ್ ಬೆಲೆ ಹೆಚ್ಚಾಗ್ತಿದೆ. 14.2 ಕೆಜಿ ಸಿಲಿಂಡರ್ಗೆ 694 ರೂಪಾಯಿ ಪಾವತಿಸಬೇಕು. ಸಿಲಿಂಡರ್ ಬುಕ್ ಮಾಡಿದ ನಂತ್ರ ಕ್ಯಾಶ್ಬ್ಯಾಕ್ ಸಿಕ್ಕಿದ್ರೆ ಖುಷಿಯಾಗುತ್ತದೆ. ನಿಮಗೂ ಕ್ಯಾಶ್ಬ್ಯಾಕ್ ಬೇಕೆಂದ್ರೆ ಐಸಿಐಸಿಐ ಬ್ಯಾಂಕ್ ನ ಪಾಕೆಟ್ಸ್ ವ್ಯಾಲೆಟ್ ಮೂಲಕ ಸಿಲಿಂಡರ್ ಕಾಯ್ದಿರಿಸಿ.
ಪಾಕೆಟ್ಸ್ ವಾಲೆಟ್ ಪ್ರಕಾರ, ಜನವರಿಯಲ್ಲಿ ಮೊದಲ ಬಾರಿಗೆ ಪಾಕೆಟ್ಸ್ ಆಪ್ ಮೂಲಕ ಗ್ಯಾಸ್ ಬುಕಿಂಗ್ ಅಥವಾ ಬಿಲ್ ಪಾವತಿ ಮಾಡುವವರಿಗೆ ಕ್ಯಾಶ್ಬ್ಯಾಕ್ ಸಿಗಲಿದೆ. ಕ್ಯಾಶ್‌ಬ್ಯಾಕ್ ಪಡೆಯಲು ನೀವು PMRJAN2021 ಪ್ರೋಮೋ ಕೋಡ್ ನಮೂದಿಸಬೇಕು. 50 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ. ಈ ಕೊಡುಗೆ ಜನವರಿ 25ರವರೆಗೆ ಮಾನ್ಯವಾಗಲಿದೆ. ಈ ಪ್ರೋಮೋ ಕೋಡನ್ನು ತಿಂಗಳಲ್ಲಿ ಮೂರು ಬಾರಿ ಬಳಸಬಹುದು.
ಮೊದಲು ಪಾಕೆಟ್ಸ್ ವಾಲೆಟ್ ಅಪ್ಲಿಕೇಶನ್ ತೆರೆಯಬೇಕು. ಇದರ ನಂತರ ಪೇ ಬಿಲ್ ಕ್ಲಿಕ್ ಮಾಡಬೇಕು. ಅಲ್ಲಿ ಮೋರ್ ಆಯ್ಕೆ ಮಾಡಬೇಕು. ಅದ್ರಲ್ಲಿ ಎಲ್.ಪಿ.ಜಿ. ಆಯ್ಕೆ ಸಿಗಲಿದೆ. ಅದ್ರ ಮೇಲೆ ಕ್ಲಿಕ್ ಮಾಡಬೇಕು. ಸರ್ವೀಸ್ ಪ್ರೊವೈಡರ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಗ್ರಾಹಕ ಸಂಖ್ಯೆ, ವಿತರಕ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. PMRJAN2021 ಪ್ರೋಮೋ ಕೋಡ್ ನಮೂದಿಸಬೇಕಾಗುತ್ತದೆ. ನಂತ್ರ ಬುಕಿಂಗ್ ಮೊತ್ತ ನಮೂದಿಸಬೇಕು. ಇದರ ನಂತರ ವಹಿವಾಟಿನ 10 ದಿನಗಳಲ್ಲಿ ಗರಿಷ್ಠ 50 ರೂಪಾಯಿಗಳ ಕ್ಯಾಶ್‌ಬ್ಯಾಕ್ ನಿಮ್ಮ ವಾಲೆಟ್ ಗೆ ಜಮಾ ಆಗಲಿದೆ.