ಕೋವಿಡ್ ಎರಡನೇ ಅಲೆ ಆಟೊಮೊಬೈಲ್ ಕ್ಷೇತ್ರವನ್ನು ಚಿಂತೆಗೆ ದೂಡಿದೆ. ಮುಂದಿನ ದಿನಗಳು ಹೇಗೋ ಏನೋ ಎಂದು ತಲೆಮೇಲೆ ಕೈ ಹೊತ್ತು ಕೂತಿದೆ.
ಇದೇ ವೇಳೆ ದೇಶಾದ್ಯಂತ ಸುಮಾರು 15,000ಕ್ಕೂ ಹೆಚ್ಚು ವಿತರಕರನ್ನು ಪ್ರತಿನಿಧಿಸುವ ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್‌ಎಡಿಎ) ಜಿಎಸ್‌ಟಿ ಪಾವತಿಯ ರಿಟರ್ನ್ಸ್ ಸಲ್ಲಿಸಲು ಮೂರು ತಿಂಗಳ ವಿಸ್ತರಣೆ ಬಯಸಿದೆ.
ಕೋವಿಡ್ ಎರಡನೇ ಅಲೆಯ ಹೊಡೆತದಿಂದ ಬಚಾವ್ ಆಗಲು ಮುಂದಿನ ಮೂರು ತಿಂಗಳುಗಳವರೆಗೆ ಜಿಎಸ್ಟಿ ಪಾವತಿಯನ್ನು ವಿಸ್ತರಿಸುವುದು ಸೇರಿದಂತೆ ಆಟೋಮೋಟಿವ್ ವಿತರಕರು ಹಣಕಾಸಿನ ನೆರವನ್ನೂ ಸಹ ಕೇಂದ್ರದಿಂದ ಬಯಸಿದ್ದಾರೆ.
ಮತ್ತೊಮ್ಮೆ ನಿರೀಕ್ಷೆ ಹುಸಿಯಾಗಿಸಿದ ಸರ್ಕಾರ; ವಿಶೇಷ ಪ್ಯಾಕೇಜ್ ಘೋಷಿಸದ ಸಿಎಂ
ಆಟೋಮೋಟಿವ್ ವಿತರಕರ ಸಂಸ್ಥೆ ಎಫ್‌ಎಡಿಎ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ಪತ್ರ ಬರೆದು, ಈ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆ ಹಾಗೂ ತಕ್ಷಣದ ಪರಿಹಾರ ಕ್ರಮಗಳ ಅವಶ್ಯಕತೆಯನ್ನು ವಿವರಿಸಿದೆ.
ಹಾಗೆಯೇ, ಸಾಲ ಮರು ಪಾವತಿಸಲು ಪ್ರತಿ ರಾಜ್ಯವು ಘೋಷಿಸಿರುವ ಲಾಕ್‌ಡೌನ್ ದಿನಗಳ ಸಂಖ್ಯೆಗೆ ಸಮನಾಗಿ ಅವಧಿ ವಿಸ್ತರಿಸಬೇಕು, ಎಲ್ಲಾ ಸಾಲಗಳ ಬಡ್ಡಿದರವನ್ನು 90 ದಿನಗಳವರೆಗೆ ಕಡಿತ ಮಾಡುವಂತೆ ಸಂಸ್ಥೆ ಆರ್‌ಬಿಐಯನ್ನು ಕೋರಿದೆ.
ತ್ವರಿತವಾಗಿ ಕ್ರಮ ತೆಗೆದುಕೊಳ್ಳದಿದ್ದರೆ ಆಟೋ ರೀಟೇಲ್ ಕ್ಷೇತ್ರದ ಮೇಲೆ ವ್ಯತಿರಿಕ್ತ ಆರ್ಥಿಕ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ.
ಎಫ್‌ಎಡಿಎ ಪ್ರಕಾರ ಭಾರತದಲ್ಲಿ ಒಟ್ಟು ವಾಹನ ನೋಂದಣಿ ಮಾರ್ಚ್ ಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಶೇ.28ರಷ್ಟು ಕುಸಿದಿದೆ.