ಕಷ್ಟವಾದ್ರೂ ಇಷ್ಟಪಟ್ಟು ಖರೀದಿ ಮಾಡಿದ ಕಾರ್ ಅಥವಾ ಬೈಕ್ ನಲ್ಲಿ ದೋಷ ಕಂಡು ಬಂದ್ರೆ ಚಿಂತೆಯಾಗೋದು ಸಾಮಾನ್ಯ. ವಾಹನ ಕಂಪನಿಗಳು ಸಮಸ್ಯೆ ಬಗೆಹರಿಸುತ್ತವೆ ಎಂಬ ಭರವಸೆಯಲ್ಲಿ ಗ್ರಾಹಕ ವಾಹನ ಖರೀದಿ ಮಾಡಿರುತ್ತಾನೆ. ಆದ್ರೆ ವಾಹನ ಕಂಪನಿಗಳು ಸಮಸ್ಯೆಗೆ ಸ್ಪಂದಿಸದೆ ಹೋದಲ್ಲಿ ವಾಹನ ಮಾಲೀಕನ ಚಿಂತೆ ಹೆಚ್ಚಾಗುತ್ತದೆ. ಇನ್ಮುಂದೆ ಚಿಂತಿಸುವ ಅಗತ್ಯವಿಲ್ಲ. ವಾಹನ ಕಂಪನಿಗಳ ಮೇಲೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಕಳಪೆ ಮಟ್ಟದ ವಾಹನ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ದೋಷವಿರುವ ವಾಹನಗಳನ್ನು ಮಾರಾಟ ಮಾಡುವ ಕಂಪನಿಗಳು ವಾಹನವನ್ನು ಮರಳಿ ಪಡೆಯಬೇಕು. ಇದು ವಾಹನಗಳನ್ನು ಆಮದು ಮಾಡಿಕೊಳ್ಳುವ ಕಂಪನಿಗಳಿಗೂ ಅನ್ವಯಿಸುತ್ತದೆ. ಒಂದು ವೇಳೆ ವಾಹನ ಕಂಪನಿಯು ಕೆಟ್ಟ ವಾಹನವನ್ನು ವಾಪಸ್ ಪಡೆಯದೆ ಹೋದಲ್ಲಿ 10 ಲಕ್ಷ ರೂಪಾಯಿಗಳಿಂದ 1 ಕೋಟಿ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.
ವಾಹನ ಕಂಪನಿ ಮೇಲಿನ ಈ ದಂಡವು ಕಾರಿನ ದೋಷವನ್ನು ಸರಿಪಡಿಸುವ ವೆಚ್ಚಕ್ಕಿಂತ ಹೆಚ್ಚಿದೆ. ಯಾವುದೇ ರೀತಿಯ ಶುಲ್ಕವನ್ನು ಗ್ರಾಹಕರಿಗೆ ವಿಧಿಸುವಂತಿಲ್ಲ. ಈ ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಒಂದು ಕಾರು ಕಂಪನಿ ವಾರ್ಷಿಕವಾಗಿ 500 ವಾಹನಗಳನ್ನು ಮಾರಾಟ ಮಾಡಿದರೆ, ಅದರಲ್ಲಿ ಶೇಕಡಾ 20 ರಷ್ಟು ದೂರುಗಳು ಬಂದರೆ, ಮರುಪಡೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತದೆ. ಕಾರುಗಳ ವಾರ್ಷಿಕ ಮಾರಾಟವು 501 ರಿಂದ 10,000 ಯುನಿಟ್ಗಳವರೆಗೆ ಇರುತ್ತದೆ. ದೂರುಗಳ ಸಂಖ್ಯೆ ಕನಿಷ್ಠ 1,050 ಆಗಿರಬೇಕು.
ಕಡ್ಡಾಯ ಮರುಪಡೆಯುವಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಕನಿಷ್ಠ 1,250 ಘಟಕಗಳಲ್ಲಿ ದೂರುಗಳನ್ನು ಸ್ವೀಕರಿಸಬೇಕಾಗುತ್ತದೆ. ವಾಹನ ಮಾಲೀಕರಿಗೆ ತಮ್ಮ ದೂರುಗಳನ್ನು ನೋಂದಾಯಿಸಲು ಅನುಕೂಲವಾಗುವಂತೆ ಪೋರ್ಟಲ್ ಸ್ಥಾಪಿಸುವುದು ಸರ್ಕಾರದ ಉದ್ದೇಶವಾಗಿದೆ. ದೂರುಗಳ ಆಧಾರದ ಮೇಲೆ ವಾಹನ ಕಂಪನಿಗಳಿಗೆ ನೋಟಿಸ್ ಕಳುಹಿಸಲಾಗುವುದು. ಅದಕ್ಕೆ 30 ದಿನಗಳಲ್ಲಿ ವಾಹನ ಕಂಪನಿಗಳು ಉತ್ತರಿಸಬೇಕಾಗುತ್ತದೆ.