ಭಾರತದಲ್ಲಿ ಕೊರೊನಾ ಪ್ರಕರಣಗಳ ಏರಿಕೆಯನ್ನ ಗಮನದಲ್ಲಿಟ್ಟುಕೊಂಡ ಆಸ್ಟ್ರೇಲಿಯಾ ಸರ್ಕಾರ ಭಾರತದ ಎಲ್ಲಾ ಪ್ರಯಾಣಿಕ ವಿಮಾನಗಳ ಪ್ರವೇಶಕ್ಕೆ ನಿರ್ಬಂಧ ಹೇರಿದೆ.
ಮೇ 15ರವರೆಗೂ ಈ ತಾತ್ಕಾಲಿಕ ನಿರ್ಬಂಧ ಮುಂದುವರಿಯಲಿದೆ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ. ಆಸ್ಟ್ರೇಲಿಯಾ ಸರ್ಕಾರದ ಈ ನಿರ್ಧಾರದಿಂದಾಗಿ ಆಸಿಸ್ ಕ್ರಿಕೆಟಿಗರು ಸೇರಿದಂತೆ ಅನೇಕರಿಗೆ ಸಮಸ್ಯೆಯಾದಂತಾಗಿದೆ.
ಕೆನಡಾ, ಯುಎಇ ಹಾಗೂ ಬ್ರಿಟನ್ ರಾಷ್ಟ್ರಗಳು ಈಗಾಗಲೇ ಭಾರತಕ್ಕೆ ವಿಮಾನ ಹಾರಾಟವನ್ನ ನಿರ್ಬಂಧಗೊಳಿಸಿವೆ.
ಭಾರತದಲ್ಲಿ ಕೊರೊನಾ ಸಂಕಷ್ಟ ಮಿತಿಮೀರಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಆಕ್ಸಿಜನ್ ಟ್ಯಾಂಕ್, ವೆಂಟಿಲೇಟರ್ ಹಾಗೂ ಪಿಪಿಇ ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯಗಳನ್ನ ಕಳುಹಿಸಿಕೊಡಲಿದೆ ಎಂದು ಸ್ಕಾಟ್ ಮಾರಿಸನ್ ಹೇಳಿದ್ದಾರೆ.
ಭಾರತಕ್ಕೆ ಬಂದೊದಗಿರುವ ಈ ಸಂಕಷ್ಟವನ್ನ ನೋಡುತ್ತಿದ್ದರೆ ಮನಸ್ಸಿಗೆ ನೋವಾಗುತ್ತೆ ಎಂದು ಮಾರಿಸನ್ ಹೇಳಿದ್ದಾರೆ.