ಕಳೆದ ಕೆಲವು ತಿಂಗಳುಗಳಿಂದ ಜನ ಕ್ರಿಪ್ಟೋಕರೆನ್ಸಿಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಅದರ ಬಗ್ಗೆ ಹೆಚ್ಚು ಚರ್ಚಿಸುತ್ತಿದ್ದಾರೆ. ಒಂದೆಡೆ ಜನ ಕ್ರಿಪ್ಟೋಕರೆನ್ಸಿಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರೆ, ಹ್ಯಾಕರ್‌ಗಳು ಅದರ ಲಾಭವನ್ನು ಪಡೆದು ಜನರನ್ನು ವಂಚಿಸುತ್ತಿದ್ದಾರೆ.
ಇದಕ್ಕಾಗಿ ಬಳಕೆದಾರರಿಗೆ ಅಪಾಯಕಾರಿ ಮಾಲ್ ವೇರ್ ಮತ್ತು ಆಡ್ ವೇರ್ ಹೊಂದಿರುವ ದುರುದ್ದೇಶಪೂರಿತ ಆಪ್ ಗಳನ್ನು ಇನ್‌ಸ್ಟಾಲ್ ಮಾಡಲು ಹೇಳಲಾಗುತ್ತದೆ. ಅದನ್ನು ಇನ್ ಸ್ಟಾಲ್ ಮಾಡಿದ ತಕ್ಷಣ, ಬಳಕೆದಾರರ ಡೇಟಾ ಹ್ಯಾಕ್ ಆಗುತ್ತದೆ. ಆದರೆ, ಗೂಗಲ್ ಇಂತಹ ಹಲವು ಆಪ್ ಗಳನ್ನು ಗುರುತಿಸಿದ್ದು, ಅವುಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ.
ಗೂಗಲ್ ಪ್ಲೇ ಸ್ಟೋರ್‌ನಿಂದ ಒಟ್ಟು 8 ಅಪಾಯಕಾರಿ ಆಪ್ ಗಳನ್ನು ತೆಗೆದು ಹಾಕಿದೆ, ಅವು ಕ್ರಿಪ್ಟೋಕರೆನ್ಸಿ ಮೈನಿಂಗ್ ಆಪ್ ಗಳಂತೆ ಮುಖವಾಡ ಹೊಂದಿದೆ. ಇದರಲ್ಲಿ ಬಳಕೆದಾರರು ಹೂಡಿಕೆಯ ಮೇಲೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಹೇಳಲಾಗಿದ್ದು, ಭದ್ರತಾ ಸಂಸ್ಥೆ ‘ಟ್ರೆಂಡ್ ಮೈಕ್ರೊ’ ತನ್ನ ವಿಶ್ಲೇಷಣೆಯ ಆಧಾರದ ಮೇಲೆ ವರದಿಯಲ್ಲಿ ಈ 8 ದುರುದ್ದೇಶಪೂರಿತ ಆಪ್‌ಗಳು ಜಾಹೀರಾತುಗಳ ನೆಪದಲ್ಲಿ ಜನರನ್ನು ಮೋಸಗೊಳಿಸುತ್ತಿವೆ, ಸರಾಸರಿ ಮಾಸಿಕ ಶುಲ್ಕ 15 ಡಾಲರ್(ಸುಮಾರು 1115 ರೂ.) ಇರುವ ಚಂದಾದಾರಿಕೆ ಸೇವೆಗೆ ಪಾವತಿಸಬೇಕಿದೆ ಎನ್ನಲಾಗಿದೆ.
ಟ್ರೆಂಡ್ ಮೈಕ್ರೋ ಈ ಬಗ್ಗೆ ಗೂಗಲ್ ಪ್ಲೇಗೆ ಮಾಹಿತಿ ನೀಡಿದೆ. ಗೂಗಲ್ ತಕ್ಷಣವೇ ಅವನ್ನು ತೆಗೆದುಹಾಕಿದೆ. ಇದರಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಗೂಗಲ್ ಈ ಆಪ್ ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದ್ದರೂ, ಈ ಆಪ್ ಅನ್ನು ನಿಮ್ಮ ಫೋನ್ ನಲ್ಲಿ ಇನ್ ಸ್ಟಾಲ್ ಮಾಡಿರಬಹುದು. ಇಂತಹ ಪರಿಸ್ಥಿತಿಯಲ್ಲಿ, ನೀವು ಈ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿದ್ದರೆ, ಅದನ್ನು ತಕ್ಷಣವೇ ಡಿಲೀಟ್ ಮಾಡಬೇಕಾಗುತ್ತದೆ.
ಇವುಗಳೇ 8 ಅಪಾಯಕಾರಿ ಆಪ್‌ಗಳು …..
– ಬಿಟ್‌ಫಂಡ್‌ಗಳು – ಕ್ರಿಪ್ಟೋ ಕ್ಲೌಡ್ ಮೈನಿಂಗ್
– ಬಿಟ್ ಕಾಯಿನ್ ಮೈನರ್ – ಕ್ಲೌಡ್ ಮೈನಿಂಗ್
– ಬಿಟ್ ಕಾಯಿನ್ (ಬಿಟಿಸಿ) – ಪೂಲ್ ಮೈನಿಂಗ್ ಕ್ಲೌಡ್ ವಾಲೆಟ್
– ಕ್ರಿಪ್ಟೋ ಹೋಲಿಕ್ – ಬಿಟ್‌ಕಾಯಿನ್ ಕ್ಲೌಡ್ ಮೈನಿಂಗ್
– ಡೈಲಿ ಬಿಟ್‌ಕಾಯಿನ್ ಬಹುಮಾನಗಳು – ಕ್ಲೌಡ್ ಬೇಸ್ಡ್ ಮೈನಿಂಗ್ ಸಿಸ್ಟಂ
– ಬಿಟ್‌ಕಾಯಿನ್ 2021
– ಮೈನ್‌ಬಿಟ್ ಪ್ರೊ – ಕ್ರಿಪ್ಟೋ ಕ್ಲೌಡ್ ಮೈನಿಂಗ್ ಮತ್ತು ಬಿಟಿಸಿ ಮೈನರ್ಸ್
– Ethereum (ETH) – ಪೂಲ್ ಮೈನಿಂಗ್ ಕ್ಲೌಡ್
ಈ ಎರಡು ಆಪ್‌ಗಳು ಬಳಕೆದಾರರು ಖರೀದಿಸಬೇಕಾದ ಪಾವತಿಸಿದ ಅಪ್ಲಿಕೇಶನ್‌ಗಳಾಗಿವೆ ಎಂದು ಸಂಶೋಧನಾ ತಾಣ ಹೇಳಿದೆ. ಕ್ರಿಪ್ಟೋ ಹೋಲಿಕ್ – ಬಿಟ್ ಕಾಯಿನ್ ಕ್ಲೌಡ್ ಮೈನಿಂಗ್ ಆಪ್ ಡೌನ್‌ಲೋಡ್ ಮಾಡಲು ಬಳಕೆದಾರರು 12.99 ಡಾಲರ್ (ಸುಮಾರು 966 ರೂ.) ಪಾವತಿಸಬೇಕು. ಅದೇ ಸಮಯದಲ್ಲಿ, ಬಳಕೆದಾರರು ಡೈಲಿ ಬಿಟ್ ಕಾಯಿನ್ ರಿವಾರ್ಡ್‌ಗಳನ್ನು ಡೌನ್‌ಲೋಡ್ ಮಾಡಲು 5.99 ಡಾಲರ್(ಸುಮಾರು 445 ರೂ.) ಪಾವತಿಸಬೇಕಿದೆ.
ಇದಲ್ಲದೇ, 120 ನಕಲಿ ಕ್ರಿಪ್ಟೋಕರೆನ್ಸಿ ಮೈನಿಂಗ್ ಆಪ್ ಗಳು ಇನ್ನೂ ಆನ್‌ಲೈನ್‌ನಲ್ಲಿ ಲಭ್ಯವಿದೆ ಎಂದು ಟ್ರೆಂಡ್ ಮೈಕ್ರೋ ಹೇಳಿದೆ. ಕಂಪನಿಯು ತನ್ನ ಬ್ಲಾಗ್ ನಲ್ಲಿ ಈ ಆಪ್‌ಗಳು ಕ್ರಿಪ್ಟೋ ಕರೆನ್ಸಿ ಮೈನಿಂಗ್ ಸಾಮರ್ಥ್ಯಗಳನ್ನು ಹೊಂದಿಲ್ಲ. ಆಪ್ ನಲ್ಲಿನ ಜಾಹೀರಾತುಗಳನ್ನು ನೋಡುವ ನೆಪದಲ್ಲಿ ಬಳಕೆದಾರರನ್ನು ವಂಚಿಸುತ್ತವೆ. ಈ ಕಾರಣದಿಂದಾಗಿ, ಜುಲೈ 2020 ರಿಂದ ಜುಲೈ 2021 ರವರೆಗೆ ಸುಮಾರು 4500 ಬಳಕೆದಾರರ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.