![](https://kannadadunia.com/wp-content/uploads/2020/05/cash.jpg)
ಮಡಿಕೇರಿ: ಆತ್ಮನಿರ್ಭರ ಭಾರತ ಕಾರ್ಯಕ್ರಮದಡಿ ಪಶುಸಂಗೋಪನಾ ವಲಯದಲ್ಲಿ ಪಶುಪಾಲನಾ ಮೂಲಭೂತ ಸೌಕರ್ಯ ನಿಧಿ ಯೋಜನೆ ಪ್ರಾರಂಭಿಸಿದೆ.
ಈ ಯೋಜನೆಯಡಿ ಮಾರ್ಗಸೂಚಿ ಪ್ರಕಾರ ಪಶುಸಂಗೋಪನಾ ವಲಯದ ಚಟುವಟಿಕೆಗಳಾದ ಡೈರಿ ಉತ್ಪನಗಳ ಸಂಸ್ಕರಣೆ ಮತ್ತು ಉತ್ಕೃಷ್ಠ ಡೈರಿ ಪದಾರ್ಥಗಳ ಉತ್ಪಾದನೆ, ಮಾಂಸದ ಸಂಸ್ಕರಣೆ ಮತ್ತು ಮಾಂಸ ಸಂಸ್ಕರಣಾ ಘಟಕಗಳ ಸ್ಥಾಪನೆ, ಪಶು ಆಹಾರ ತಯಾರಿಕಾ ಘಟಕಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತದೆ.
ವಿವಿಧ ವರ್ಗಗಳ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅವಕಾಶವಿದ್ದು, ಜಿಲ್ಲೆಗೆ 30 ಗುರಿ ನಿಗದಿಪಡಿಸಿದೆ. ಪಿ.ಪಿ.ಪಿ ಮಾದರಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಈ ಘಟಕ ಸ್ಥಾಪನೆ ಮತ್ತು ವಿಸ್ತರಣೆಗಳಿಗೆ ಅವಕಾಶವಿದ್ದು, ರಾಷ್ಟ್ರೀಕೃತ ಬ್ಯಾಂಕ್‍ಗಳ ಮೂಲಕ ಸಾಲ ಸೌಲಭ್ಯವಿದೆ. ಅರ್ಜಿ ಸಲ್ಲಿಕೆ ಹಾಗೂ ಇತರೆ ವಿವರಗಳಿಗೆ ವೆಬ್‍ಸೈಟ್ ವಿಳಾಸ www.ahidf.udayamimithra.in ಕ್ಕೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಪಶು ಆಸ್ಪತ್ರೆ ಮಡಿಕೇರಿ: 9448764727, ವಿರಾಜಪೇಟೆ: 7624962100, ಸೊಮವಾರಪೇಟೆ: 9448655660, ಅವರನ್ನು ಸಂಪರ್ಕಿಸಬಹುದು ಎಂದು ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಪಿ.ಸುರೇಶ್ ಭಟ್ ತಿಳಿಸಿದ್ದಾರೆ.