
ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಒಟಿಪಿ ನಮೂದಿಸಬೇಕಿದೆ. 10,000 ರೂ.ಮತ್ತು ಮೇಲ್ಪಟ್ಟ ಹಣ ವಿತ್ ಡ್ರಾಗೆ ಮೊಬೈಲ್ ಗೆ ಬರುವ ಓಟಿಪಿ ನಮೂದಿಸಿದರೆ ಹಣ ವಿತ್ ಡ್ರಾ ಮಾಡಿಕೊಳ್ಳಬಹುದು.
ಹಣ ವಿತ್ ಡ್ರಾ ಮಾಡುವ ಸಂದರ್ಭದಲ್ಲಿ ಡೆಬಿಟ್ ಕಾರ್ಡ್, ಮೊಬೈಲ್ ಇರಬೇಕು. ಎಟಿಎಂ ಕಾರ್ಡ್ ಹಾಕಿದ ನಂತರ ಪಿನ್ ನಮೂದಿಸಿ ಎಷ್ಟು ಹಣ ಬೇಕು ಎನ್ನುವುದನ್ನು ಎಂಟರ್ ಮಾಡಬೇಕು. ಈ ವೇಳೆ ಒಟಿಪಿ ಹಾಕಿ ಎನ್ನುವ ಸೂಚನೆ ಎಟಿಎಂ ಪರದೆ ಮೇಲೆ ತೋರಿಸುತ್ತದೆ. ನಿಮ್ಮ ಖಾತೆಗೆ ಲಿಂಕ್ ಆದ ಮೊಬೈಲ್ ನಂಬರ್ ಗೆ ಬರುವ 4 ಸಂಖ್ಯೆಯ ಒಟಿಪಿ ನಮೂದಿಸಿದ್ದರೆ ವ್ಯವಹಾರ ಪೂರ್ಣವಾಗುತ್ತದೆ.