
ಬ್ಯಾಂಕ್ ಗ್ರಾಹಕರು ಹೆಚ್ಚಾಗಿ ವಂಚಕರ ಬಾಯಿಗೆ ಆಹಾರ ಆಗೋದು ತಮ್ಮ ಎಟಿಎಂ ಕಾರ್ಡ್ ಬಳಕೆ ವಿಚಾರದಲ್ಲಿ. ಹೀಗಾಗಿ ಸ್ಟೇಟ್ ಬ್ಯಾಂಕ್ ಇಂಡಿಯಾ ವಂಚಕರಿಂದ ಪಾರಾಗೋಕೆ ಗ್ರಾಹಕರಿಗೆ ಟ್ವಿಟರ್ನಲ್ಲಿ 9 ಸಲಹೆಗಳನ್ನ ನೀಡಿದೆ.
1. ಎಟಿಎಂ ಮಷಿನ್ನಲ್ಲಿ ಪಾಸ್ವರ್ಡ್ ಟೈಪ್ ಮಾಡುವಾಗ ಕೀ ಬೋರ್ಡ್ನ್ನ ಮರೆ ಮಾಡೋದನ್ನ ಮರೆಯದಿರಿ.
2. ನಿಮ್ಮ ಎಟಿಎಂ ಪಿನ್ನ್ನ ಎಲ್ಲಿಯೂ ಬರೆದಿಡಬೇಡಿ.
3. ನಿಮ್ಮ ಎಟಿಎಂ ಕಾರ್ಡ್ ಪಿನ್ ಹಾಗೂ ಯಾವುದೇ ಮಾಹಿತಿಯನ್ನ ಇತರರೊಂದಿಗೆ ಶೇರ್ ಮಾಡಬೇಡಿ.
4. ನಿಮ್ಮ ಎಟಿಎಂ ಕಾರ್ಡ್ ವಿವರ ಕೇಳುವ ಯಾವುದೇ ಟೆಕ್ಸ್ಟ್ ಮೆಸೇಜ್, ಫೋನ್ ಕಾಲ್ ಹಾಗೂ ಇಮೇಲ್ಗೆ ಸ್ಪಂದಿಸದಿರಿ.
5. ಎಟಿಎಂಗೆ ಪಿನ್ ಸೆಟ್ ಮಾಡುವಾಗ ನಿಮ್ಮ ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ ಅಥವಾ ಅಕೌಂಟ್ ನಂಬರ್ನ ಸಂಖ್ಯೆಗಳನ್ನ ಬಳಕೆ ಮಾಡಬೇಡಿ.
6. ನಿಮ್ಮ ವ್ಯವಹಾರದ ರಶೀದಿಯನ್ನು ಸೂಕ್ತ ಜಾಗದಲ್ಲಿ ಬಿಸಾಡಿ.
7 . ವ್ಯವಹಾರ ಆರಂಭಿಸುವ ಮುನ್ನ ಒಮ್ಮೆ ಎಟಿಎಂ ಕೇಂದ್ರದಲ್ಲಿ ಅಳವಡಿಸಲಾಗಿರುವ ಸ್ಪೈ ಕ್ಯಾಮರಾವನ್ನ ನೋಡಿ.
8. ಎಟಿಎಂ ಮಷಿನ್ನಲ್ಲಿ ಹೀಟ್ ಮ್ಯಾಪಿಂಗ್ ಸಮಸ್ಯೆ ಬಗ್ಗೆ, ನಿಮ್ಮ ಹಿಂದಿರುವವರು ನಿಮ್ಮ ವ್ಯವಹಾರವನ್ನ ಕದ್ದು ನೋಡ್ತಿದ್ದಾರಾ ಅನ್ನೋದನ್ನ ಗಮನಿಸಿ.
9. ವ್ಯವಹಾರ ಅಲರ್ಟ್ ಬಗ್ಗೆ ತಿಳಿದುಕೊಳ್ಳಲು ಅಗಾಗ ಸೈನಪ್ ಆಗುತ್ತಿರಿ.