ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಅಟಲ್ ಪಿಂಚಣಿಯಡಿ ದಿನಕ್ಕೆ 7 ರೂಪಾಯಿಗಳನ್ನು ಉಳಿಸುವ ಮೂಲಕ ಗಳಿಕೆ ಮಾಡಬಹುದು. ದಿನಕ್ಕೆ 7 ರೂಪಾಯಿ ಉಳಿಸಿ 60 ವರ್ಷಗಳ ನಂತರ ನೀವು ಪ್ರತಿ ತಿಂಗಳು 5,000 ರೂಪಾಯಿ (ವರ್ಷಕ್ಕೆ 60 ಸಾವಿರ)ಪಿಂಚಣಿ ಪಡೆಯಬಹುದು.
ಈ ಪಿಂಚಣಿ ಯೋಜನೆ ಪ್ರಮಾಣವನ್ನು ಒಂದು ವರ್ಷದಲ್ಲಿ ಯಾವಾಗ ಬೇಕಾದ್ರೂ ಬದಲಿಸಬಹುದು. ಈ ನಿಯಮ ಜುಲೈ 1 ರಿಂದ ಜಾರಿಗೆ ಬಂದಿದೆ. ಈ ಯೋಜನೆಯನ್ನು ಹೆಚ್ಚು ಆಕರ್ಷಕವಾಗಿ ಮಾಡಲು ಸರ್ಕಾರ ಹೀಗೆ ಮಾಡಿದೆ. ಈ ಹಿಂದೆ ಏಪ್ರಿಲ್ ತಿಂಗಳಿನಲ್ಲಿ ಮಾತ್ರ ಪಿಂಚಣಿದಾರನಿಗೆ ಮೊತ್ತವನ್ನು ಬದಲಿಸುವ ಅಧಿಕಾರವಿತ್ತು.
ಸದಸ್ಯರು ಆರ್ಥಿಕ ವರ್ಷದಲ್ಲಿ ಒಮ್ಮೆ ಮಾತ್ರ ಪಿಂಚಣಿ ಯೋಜನೆಯನ್ನು ಬದಲಾಯಿಸಬಹುದು. ಅಟಲ್ ಪಿಂಚಣಿ ಯೋಜನೆಯಡಿ ಸುಮಾರು 2.28 ಕೋಟಿ ಷೇರುದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಟಲ್ ಪಿಂಚಣಿ ಯೋಜನೆಯನ್ನು 2015 ರ ಮೇ ನಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆ ದೇಶದ ಎಲ್ಲ ನಾಗರಿಕರಿಗೆ 18 ರಿಂದ 40 ವರ್ಷದವರೆಗೆ ತೆರೆದಿರುತ್ತದೆ. ಈ ಯೋಜನೆಯಡಿ, ಪಿಂಚಣಿದಾರರು 60 ವರ್ಷ ತುಂಬಿದಾಗ ಪ್ರತಿ ತಿಂಗಳು 1,000 ರೂಪಾಯಿಗಳಿಂದ 5,000 ರೂಪಾಯಿವರೆಗೆ ಪಿಂಚಣಿ ಪಡೆಯುತ್ತಾನೆ.
ಈ ಖಾತೆಯನ್ನು ಸರ್ಕಾರಿ, ಖಾಸಗಿ ಅಥವಾ ಗ್ರಾಮೀಣ ಬ್ಯಾಂಕುಗಳಲ್ಲಿಯೂ ತೆರೆಯಲಾಗುತ್ತದೆ. ಇದಲ್ಲದೆ, ಪಾವತಿ ಬ್ಯಾಂಕುಗಳು ಸಹ ಈ ಖಾತೆಗಳನ್ನು ತೆರೆಯುತ್ತವೆ. ಆದಾಯ ತೆರಿಗೆ ಸ್ಲ್ಯಾಬ್‌ನಿಂದ ಹೊರಗಿರುವ ಜನರು ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಬಹುದು. https://npscra.nsdl.co.in/nsdl/scheme-details/APY_Scheme_Details.pdf ನಲ್ಲಿ ಹೆಚ್ಚಿನ ಮಾಹಿತಿ ಸಿಗಲಿದೆ.