alex Certify ಈ ʼರಾಶಿʼಯವರು ಇಂದು ಉದ್ಯಮದಲ್ಲಿ ವಹಿಸಿ ಎಚ್ಚರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ʼರಾಶಿʼಯವರು ಇಂದು ಉದ್ಯಮದಲ್ಲಿ ವಹಿಸಿ ಎಚ್ಚರ

ಮೇಷ : ವೃತ್ತಿ ಜೀವನವು ಕೊಂಚ ಕಿರಿಕಿರಿ ಎನಿಸಲಿದೆ. ಹಿರಿಯರ ಆಶೀರ್ವಾದದಿಂದ ಉದ್ಯಮವು ಲಾಭದ ದಿಕ್ಕಿನಲ್ಲಿ ಸಾಗಲಿದೆ. ಹೊಸ ಜನರನ್ನ ಭೇಟಿ ಮಾಡಲಿದ್ದೀರಿ. ಸಂಗಾತಿಯೊಂದಿಗೆ, ಮಕ್ಕಳೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಆರೋಗ್ಯದ ಕಡೆಗೆ ಜಾಗ್ರತೆ ಇರಲಿ.

ವೃಷಭ : ನೀವು ಮಾಡುವ ಕೆಲಸಗಳಿಗೆ ಪೋಷಕರಿಂದ ಸಂಪೂರ್ಣ ಬೆಂಬಲ ಇರಲಿದೆ. ರಾಜಕೀಯದಲ್ಲಿ ಭಾಗವಹಿಸುವ ಅವಕಾಶಗಳು ಕೂಡಿಬರಲಿದೆ. ಪಿತ್ರಾರ್ಜಿತ ಆಸ್ತಿ ನಿಮ್ಮ ಕೈ ಸೇರಲಿದೆ. ಸಾರ್ವಜನಿಕರಿಂದ ಪ್ರಶಂಸೆ ಗಳಿಸಲಿದ್ದೀರಿ.

ಮಿಥುನ : ಈ ದಿನವು ನಿಮ್ಮ ನಿರೀಕ್ಷೆಗೆ ತದ್ವಿರುದ್ಧವಾಗಿ ಇರಲಿದೆ. ಉದ್ಯಮದಲ್ಲಿ ಆಕಸ್ಮಿಕ ನಷ್ಟ ಉಂಟಾಗಲಿದೆ. ಅಪಾಯಕಾರಿ ಕೆಲಸ ಹಾಗೂ ದೂರ ಪ್ರಯಾಣದಿಂದ ಅಂತರ ಕಾಯ್ದುಕೊಳ್ಳಿ. ಆರೋಗ್ಯದ ಕಡೆಗೆ ಜಾಗ್ರತೆ ವಹಿಸಿ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಇದೆ.

ಕಟಕ : ಇಂದು ನಿಮ್ಮ ಪಾಲಿಗೆ ಮಿಶ್ರಫಲ ದೊರೆಯಲಿದೆ. ವ್ಯಾಪಾರಸ್ಥರಿಗೆ ಆರಂಭದಲ್ಲಿ ನಷ್ಟ ಎನಿಸಿದ್ರೂ ಸಹ ಕ್ರಮೇಣವಾಗಿ ಲಾಭ ಸಿಗಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಮೇಲಿನ ಭರವಸೆಯ ಕೊರತೆಯಿಂದ ಕಷ್ಟ ಅನುಭವಿಸಲಿದ್ದೀರಿ. ಯಾರಿಂದಲೂ ಸಹಾಯ ನಿರೀಕ್ಷಿಸಬೇಡಿ.

ಸಿಂಹ : ಆಸ್ತಿ ವಿವಾದದಲ್ಲಿ ಸಿಲುಕಿ ಹಾಕಿಕೊಳ್ಳುವ ಸಾಧ್ಯತೆ ಇದೆ. ರಾಜಕೀಯ ಜೀವನದಲ್ಲಿ ಉತ್ತಮ ಅವಕಾಶ ಸಿಗಲಿದೆ. ಕುಟುಂಬದಲ್ಲಿ ಸಾಮರಸ್ಯ ದೂರಾಗಿ ಶಾಂತಿ ನೆಲೆಸಲಿದೆ. ಸಂಗಾತಿಯ ಜೊತೆ ಉತ್ತಮ ಸಮಯ ಕಳೆಯುತ್ತೀರಿ. ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶ ಇದೆ.

ಕನ್ಯಾ : ಕುಟುಂಬ ವ್ಯವಹಾರ ವಿಸ್ತರಣೆಗೆ ತಂದೆಯಿಂದ ಮಾರ್ಗದರ್ಶನ ಪಡೆಯುತ್ತೀರಿ. ಹೊಸ ಉದ್ಯಮಕ್ಕೆ ಕೈ ಹಾಕುವ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಸವಾಲು ಎದುರಾಗಲಿದೆ. ಉದ್ಯೋಗಕ್ಕಾಗಿ ಅರಸುತ್ತಿರುವವರು ಶುಭ ಸುದ್ದಿ ಕೇಳಲಿದ್ದೀರಿ.

ತುಲಾ : ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅವಕಾಶಗಳು ನಿಮ್ಮದಾಗಲಿದೆ. ಕೆಲಸ ಹಾಗೂ ವೈಯಕ್ತಿಕ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ಸಂಗಾತಿಯಿಂದ ಸಿಹಿ ಸುದ್ದಿ ಕೇಳಲಿದ್ದೀರಿ. ಸ್ತ್ರೀಯರು ಸಂತೋಷದ ವಾತಾವರಣದಲ್ಲಿ ಇರಲಿದ್ದಾರೆ.

ವೃಶ್ಚಿಕ : ಮೇಲಾಧಿಕಾರಿಗಳಿಂದ ಉತ್ತಮ ಪ್ರಶಂಸೆ ಪಡೆಯಲಿದ್ದೀರಿ. ಒಡಹುಟ್ಟಿದವರ ಜೊತೆ ಉತ್ತಮ ಸಮಯ ಕಳೆಯುತ್ತೀರಿ. ಕಿಕ್ಕಿರಿದ ಸ್ಥಳಗಳಿಗೆ ಭೇಟಿ ನೀಡೋದನ್ನ ತಪ್ಪಿಸಿ ಹಾಗೂ ನಿಮ್ಮ ಆರೋಗ್ಯ ಕಾಳಜಿ ವಹಿಸಿ. ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ.

ಧನು : ಕಚೇರಿಯಲ್ಲಿ ನಿಮ್ಮ ಉತ್ತಮ ನಡವಳಿಕೆ ಸಹೋದ್ಯೋಗಿಗಳ ವಿಶ್ವಾಸ ಗಳಿಸಲು ಸಾಧ್ಯವಾಗಲಿದೆ. ಸಂದು ನೋವು ಹಾಗೂ ಬೆನ್ನು ನೋವಿನಿಂದ ಬಳಲುವ ಸಾಧ್ಯತೆ ಇದೆ. ಭೂ ವ್ಯವಹಾರದಲ್ಲಿ ಅಧಿಕ ಲಾಭದ ನಿರೀಕ್ಷೆ ಇದೆ.

ಮಕರ : ಬಂಧು ವರ್ಗದಿಂದ ಸಂತಸ ಸುದ್ದಿಯನ್ನ ಕೇಳುವ ಸಾಧ್ಯತೆ ಇದೆ. ಸರ್ಕಾರಿ ಉದ್ಯೋಗಿಗಳಿಗೆ ನೆಮ್ಮದಿ ಇದೆ. ಕಂಕಣ ಭಾಗ್ಯವಿದೆ. ಕೋರ್ಟ್​ ಕಚೇರಿ ಕೆಲಸದಲ್ಲಿ ಹಿನ್ನಡೆ ಅನುಭವಿಸಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕುಂಭ : ವಿಳಂಬ ಗತಿಯಲ್ಲಿ ಸಾಗುತ್ತಿದ್ದ ಕೆಲಸಗಳು ವೇಗಗತಿಯಲ್ಲಿ ಸಾಗಲಿದೆ. ಅತ್ಯಮೂಲ್ಯ ವಸ್ತುವೊಂದನ್ನ ಕಳೆದುಕೊಳ್ಳಲಿದ್ದೀರಿ. ವೈದ್ಯಕೀಯ ರಂಗದವರಿಗೆ ಉತ್ತಮ ಆದಾಯದ ನಿರೀಕ್ಷೆ ಇದೆ. ದಿನಸಿ ವ್ಯಾಪಾರಿಗಳಿಗೆ ಕೊಂಚ ನಷ್ಟವಾಗಲಿದೆ.

ಮೀನ : ನಿಮ್ಮ ಸೋಮಾರಿತನದ ಗುಣದಿಂದಾಗಿಯೇ ಉತ್ತಮ ಅವಕಾಶಗಳನ್ನ ಕಳೆದುಕೊಳ್ಳಲಿದ್ದೀರಿ. ಕಚೇರಿ ಕೆಲಸದಲ್ಲಿ ಹೆಚ್ಚಿನ ಗಮನ ನೀಡಲು ಸಾಧ್ಯವಾಗೋದಿಲ್ಲ. ಕುಟುಂಬಸ್ಥರ ಸಮಾಗಮ ಸಾಧ್ಯತೆ ಇದೆ. ಉನ್ನತ ಹುದ್ದೆ ಪ್ರಾಪ್ತವಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Chytré triky pro vaši kuchyni, zahradu a život: objevte naše nejlepší tipy a triky pro vaši každodenní rutinu. Uvařte si lahodné pokrmy a pěstujte si zeleninu jako profesionálové. Naše užitečné články vám pomohou vytvořit skvělý životní styl. Najít kočku: vrcholový test pozornosti на Kde se skrývá autíčko: jen Vynikající jemné bramborové placky s Jak najít Tajemná výzva: pouze 2 % lidí Pikantní krabí salát s fazolemi: lahodný recept na Vyzkoušejte to, jen géniusové: Proč je IQ test se optickým klamem: Najděte Top 10 potravin pro dlouhověkost: Co Získat nejnovější lifestylové tipy, kuchařské triky a užitečné články o zahradničení na našem webu! Najdete zde spoustu inspirace pro vylepšení svého každodenního života a získání nových dovedností. Buďte součástí naší komunity a objevujte společně s námi radost z jednoduchých, ale efektivních triků pro pohodlnější a zdravější život!