ಪ್ರವಾಸೋದ್ಯಮವನ್ನೇ ಬಲವಾಗಿ ನಂಬಿಕೊಂಡಿರುವ ಗೋವಾ ರಾಜ್ಯದಲ್ಲಿ ಈಗ ನಿಧಾನವಾಗಿ ಚಟುವಟಿಕೆ ಆರಂಭವಾಗಿದೆ. ಸದ್ಯಕ್ಕೆ ಅತಿ ಶ್ರೀಮಂತ ಪ್ರವಾಸಿಗರಿಗಾಗಿ ಗೋವಾ ಸಿದ್ಧವಾಗಿದ್ದು, ಕಳೆದ ಹತ್ತು ದಿನಗಳಲ್ಲಿ ಒಂಬತ್ತು ಜೆಟ್ ಗಳು ಗೋವಾಕ್ಕೆ ಬಂದಿಳಿದಿವೆ.
ಗೋವಾದಲ್ಲಿ ಐಷಾರಾಮಿ ಮನೆ ಹೊಂದಿರುವ ಅಥವಾ ಲೀಸ್ ಮೇಲೆ ವಿಲ್ಲಾ ಪಡೆದಿರುವವರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಹೆಚ್ಚಿನ ವಿಮಾನಗಳು ದೆಹಲಿ ಮತ್ತು ಮುಂಬೈನಿಂದ ಬಂದಿವೆ. ವೆಕೇಶನ್ ಹೋಮ್ ಗಳನ್ನು ಹೊಂದಿರುವವರು ಗೋವಾಕ್ಕೆ ತೆರಳಲು ಬಯಸುತ್ತಿದ್ದು, ಚಾರ್ಟರ್ ಗಳಿಗೆ ಬೇಡಿಕೆ ಬಂದಿದೆ ಎಂದು ಬುಕ್ ಮೈ ಚಾರ್ಟರ್ ಮುಖ್ಯಸ್ಥರು ಹೇಳಿಕೊಂಡಿದ್ದಾರೆ.
ಇದೀಗ ಜನರು ರಜೆ ಕಳೆಯಲು ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ, ಹೀಗಾಗಿ ಸಾಧ್ಯವಾದಷ್ಟು ಅವರ ಆಯ್ಕೆ ಗೋವಾ ಇರುತ್ತದೆ ಎಂಬ ಮಾತಿದೆ.