ನವದೆಹಲಿ: ಫ್ಯೂಚರ್
ರೀಟೇಲ್ ಹಾಗೂ ರಿಲಾಯನ್ಸ್ ನಡುವಿನ ವ್ಯವಹಾರ ಒಪ್ಪಂದ ಮುರಿದು ಬಿದ್ದಲ್ಲಿ 11 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಇದೆ ಎಂದು ಎಫ್ಎಂಸಿಜಿ ವಿತರಕರು ಹಾಗೂ ವ್ಯಾಪಾರಸ್ಥರ ಸಂಘ ಹಾಗೂ ದೆಹಲಿ ಮೂಲದ ಎನ್.ಜಿ.ಒ ಒಂದು ಹೇಳಿದೆ.
ಫ್ಯೂಚರ್ ಗ್ರೂಪ್ಸ್ ನಲ್ಲಿ ಅಮೆಜಾನ್ ಕೂಡ ಶೇ.49 ರಷ್ಟು ಹೂಡಿಕೆ ಹೊಂದಿದೆ. ಫ್ಯೂಚರ್ ಗ್ರೂಪ್ ಹಾಗೂ ಅಮೆಜಾನ್ ಭಾರತೀಯ ಕಂಪನಿಗಳಿಗೆ ರೀಟೇಲ್, ಲಾಜಿಸ್ಟಿಕ್ ಹಾಗೂ ವೇರ್ ಹೌಸಿಂಗ್ ನೀಡಲು ಕಾನೂನಾತ್ಮಕ ಭಿನ್ನಾಭಿಪ್ರಾಯದ ಕಾರಣ ಹಿಂದೇಟು ಹಾಕುತ್ತಿವೆ. ಇದರಿಂದ ಫ್ಯೂಚರ್ – ರಿಲಾಯನ್ಸ್ ಗಳ ನಡುವೆ ಒಪ್ಪಂದ ಮುರಿದು ಬೀಳುವ ಸಾಧ್ಯತೆ ಇದೆ.
ಮಹಿಳಾ ಸಿಬ್ಬಂದಿಗೆ FDA ಲೈಂಗಿಕ ಕಿರುಕುಳ
ಫ್ಯೂಚರ್ ಗ್ರೂಪ್ಸ್ ದೇಶದ 450 ನಗರಗಳಲ್ಲಿ 2 ಸಾವಿರ ಅಂಗಡಿಗಳನ್ನು ಹೊಂದಿದೆ. 6 ಸಾವಿರದಷ್ಟು ಪೂರೈಕೆದಾರರು ಕಂಪನಿ ಜತೆ ಇದ್ದಾರೆ. ರಿಲಾಯನ್ಸ್ 24,713 ಕೋಟಿ ರೂ. ಆಸ್ತಿಯನ್ನು ಹೊಂದಿದೆ.
ಆದರೆ, ಫ್ಯೂಚರ್ ಗ್ರೂಪ್ ಮತ್ತು ರಿಲಾಯನ್ಸ್ ಅದಕ್ಕೆ ಸ್ಪಷ್ಟನೆ ನೀಡಿದ್ದು, ಬಿಗ್ ಬಜಾರ್, ನೀಲಗಿರಿ, ಸೆಂಟ್ರಲ್ ಬ್ರ್ಯಾಂಡ್ ಫ್ಯಾಕ್ಟರಿ, ಈಸಿ ಡೇ ಹಾಗೂ ಇತರ ಕಡೆಗಳಲ್ಲಿ ಯಾವುದೇ ಉದ್ಯೋಗ ನಷ್ಟವಾಗದು. ಈ ಮೊದಲಿನಂತೆಯೇ ಇರಲಿದೆ ಎಂದು ತಿಳಿಸಿದೆ.