ದಾವಣಗೆರೆ: ಅಡಿಕೆ ದರ ಏರಿಕೆ ಕಂಡಿದ್ದು, ಬೆಳೆಗಾರರಲ್ಲಿ ಸಂತಸ ತಂದಿದೆ. ಸದ್ಯ ಕೆಂಪಡಿಕೆ ದರ ಕ್ವಿಂಟಲ್ ಗೆ 49,000 ರೂ.ಗೆ ಏರಿಕೆ ಕಂಡಿದ್ದು, ಎರಡು ತಿಂಗಳಲ್ಲಿ ಒಂದು ಕ್ವಿಂಟಲ್ ಕೆಂಪಡಿಕೆ ದರ 1500 ರೂ.ನಷ್ಟು ಹೆಚ್ಚಳವಾಗಿದೆ.
ಜನವರಿ, ಫೆಬ್ರವರಿಯಲ್ಲಿ 47000 ರೂ.ನಿಂದ 48000 ರೂ.ವರೆಗೆ ಇದ್ದ ಅಡಿಕೆ ದರ ಈಗ 49 ಸಾವಿರ ರೂ.ಗೆ ಹೆಚ್ಚಳವಾಗಿದೆ. ಕಳೆದ ವರ್ಷ ಸೆಪ್ಟೆಂಬರ್ ವೇಳೆಗೆ ಕ್ವಿಂಟಾಲ್ ಅಡಿಕೆ ದರ 58000 ರೂ.ತಲುಪಿತ್ತು. ನಂತರ ಡಿಸೆಂಬರ್ ವೇಳೆಗೆ 19,000 ರೂ.ಕುಸಿತ ಕಂಡು 39 ಸಾವಿರ ರೂ.ಗೆ ತಲುಪಿತ್ತು.
ಸೆಪ್ಟೆಂಬರ್ ವರೆಗೂ ಅಡಿಕೆ ದರದಲ್ಲಿ ಏರಿಳಿತ ಇರಲಿದ್ದು, 49,000 ರೂ. ಆಸು ಪಾಸಿನಲ್ಲಿ ದರ ಇರಲಿದೆ. ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಭಾಗದಲ್ಲಿ ಕೆಂಪಡಿಕೆ ದರ ಏರಿಕೆ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.