ಎಲೆ ಚುಕ್ಕಿ ರೋಗ, ಹಳದಿ ರೋಗ, ಕೊಳೆ ರೋಗ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಅಡಿಕೆ ಬೆಳೆಗಾರರಿಗೆ ಮತ್ತೊಂದು ಶಾಕ್ ಎದುರಾಗಿದೆ.
ಅಡಿಕೆ ಧಾರಣೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಕ್ವಿಂಟಲ್ ಗೆ 15,000 ರೂ. ಕುಸಿತ ಕಂಡಿದೆ. ಸೆಪ್ಟೆಂಬರ್ ಮೊದಲ ವಾರ ರಾಶಿ ಇಡಿ ಅಡಿಕೆ ಬೆಲೆ ಕ್ವಿಂಟಲ್ ಗೆ 58,000 ರೂ.ವರೆಗೂ ಇತ್ತು. ಅಕ್ಟೋಬರ್ ನಲ್ಲಿ 50,000 ರೂ.ಗೆ ಇಳಿದು ನಂತರ ಕಡಿಮೆಯಾಗಿ ಡಿಸೆಂಬರ್ ಎರಡನೇ ವಾರದಲ್ಲಿ 39 ಸಾವಿರ ರೂ.ಗೆ ತಲುಪಿದೆ.
2014 -15ರಲ್ಲಿ ರಾಶಿ ಇಡಿ ಅಡಿಕೆ ದರ ಒಂದು ಲಕ್ಷ ರೂ.ವರೆಗೂ ತಲುಪಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದು, ನಂತರ ದಿನಗಳಲ್ಲಿ ಕುಸಿತ ಕಂಡು ಕಳೆದ ನಾಲ್ಕು ವರ್ಷಗಳಿಂದ 50 ಸಾವಿರ ರೂ. ಆಸುಪಾಸಿನಲ್ಲಿತ್ತು.
ಭೂತಾನ್ ಸೇರಿದಂತೆ ಕೆಲವು ದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದು ದರ ಕುಸಿತಕ್ಕೆ ಕಾರಣ. ಅಲ್ಲದೆ, ಗುಟ್ಕಾ ಕಂಪನಿಗಳು ಖರೀದಿ ಕಡಿಮೆ ಮಾಡಿರುವುದು ಕೂಡ ದರ ಕುಸಿತಕ್ಕೆ ಕಾರಣವೆಂದು ಹೇಳಲಾಗಿದೆ.