ಕೊರೊನಾ ವೈರಸ್ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ, ಕೊರೊನಾ ಆರ್ಥಿಕ ಪರಿಸ್ಥಿತಿ ಮೇಲೆ ದೊಡ್ಡ ಪರಿಣಾಮ ಬೀರಿದೆ. ಕೊರೊನಾದಿಂದಾಗಿ ಖರ್ಚು ಹೆಚ್ಚಾಗಿದ್ದು, ಗಳಿಕೆ ಕಡಿಮೆಯಾಗಿದೆ. ಹೂಡಿಕೆದಾರರು ಲಾಭಕರ ಹೂಡಿಕೆ ಬಗ್ಗೆ ಹುಡುಕಾಟ ನಡೆಸುವಂತಾಗಿದೆ. ಕೆಲವೊಂದು ಉಪಾಯದ ಮೂಲಕ ಮತ್ತೆ ಗಳಿಕೆ ಶುರು ಮಾಡಬಹುದು.
ನೀವು ಸ್ವಂತ ಮನೆ ಹೊಂದಿದ್ದರೆ ಇ-ಕಾಮರ್ಸ್ ಕಂಪನಿಗಳಿಗೆ ಬಾಡಿಗೆ ನೀಡಿ ಹಣ ಗಳಿಸಲು ಶುರು ಮಾಡಿ. ಇ-ಕಾಮರ್ಸ್ ಕಂಪನಿಗಳು ಸ್ಥಳೀಯ ಉದ್ಯಮಿಗಳಿಗಾಗಿ ಕೆಲ ಯೋಜನೆಗಳನ್ನು ತರ್ತಿದೆ. ನೀವು ಮನೆಯ ಭಾಗವನ್ನು ಕಂಪನಿಗೆ ಬಾಡಿಗೆಗೆ ನೀಡಿ ಲಕ್ಷಾಂತರ ರೂಪಾಯಿ ಗಳಿಸಬಹುದು. ರೂಮಿನ ಗಾತ್ರ 250 ಚದರ ಅಡಿ ಅಥವಾ ಅದಕ್ಕಿಂತ ಕಡಿಮೆ ಇರಬಹುದು. ಇದಲ್ಲದೆ ಎರಡರಿಂದ ನಾಲ್ಕು ಕಿಲೋಮೀಟರ್ ದೂರದವರೆಗೆ ದಿನಕ್ಕೆ 20 ರಿಂದ 30 ಪಾರ್ಸಲ್ ನೀಡಬೇಕಾಗುತ್ತದೆ. ಪಾರ್ಸಲ್ ಆಧಾರದ ಮೇಲೆ ನೀವು ತಿಂಗಳಿಗೆ 18 ಸಾವಿರದಿಂದ 20 ಸಾವಿರದವರೆಗೆ ಹಣ ಸಂಪಾದಿಸಬಹುದು.
ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ ಕಾರನ್ನು ಮಾರಾಟ ಮಾಡದೆ ಹಣ ಸಂಪಾದಿಸಬಹುದು. ಕಠಿಣ ಪರಿಸ್ಥಿತಿಯಲ್ಲಿ ಕಾರನ್ನು ಆಸ್ತಿ ರೂಪದಲ್ಲಿ ಬಳಸಿಕೊಳ್ಳಿ. ಕಾರನ್ನು ಅಡವಿಟ್ಟು ಸಾಲ ತೆಗೆದುಕೊಳ್ಳಬಹುದು. ಉನ್ನತ ಬ್ಯಾಂಕುಗಳು ಕಾರಿನ ಮೂಲ ಮೌಲ್ಯದ ಶೇಕಡಾ 50ರಷ್ಟು ಸಾಲ ನೀಡುತ್ತವೆ. ಓಲಾ, ಉಬರ್ ನಂತಹ ಸಂಸ್ಥೆಗಳಿಗೆ ಕಾರನ್ನು ಬಾಡಿಗೆ ನೀಡುವ ಮೂಲಕವೂ ಹಣ ಗಳಿಸಬಹುದು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪಿಪಿಎಫ್, ಜೀವ ವಿಮಾ ಪಾಲಿಸಿಗಳನ್ನು ಬಳಸಬಹುದು. ಪಿಪಿಎಫ್ ಖಾತೆಯನ್ನು ತೆರೆದ ಮೂರನೇ ವರ್ಷದಿಂದ ಆರನೇ ವರ್ಷದವರೆಗೆ ಸಾಲ ಪಡೆಯಬಹುದು. ಪಾಲಿಸಿದಾರರು ಪಾಲಿಸಿಯ ಶರಣಾಗತಿ ಮೌಲ್ಯದ ಶೇಕಡಾ 80 ರಿಂದ 90ರಷ್ಟು ಸಾಲವನ್ನು ಪಡೆಯಬಹುದು.