ದೇಶದಲ್ಲಿಯೇ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಎನಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಸ್ಥಿರ ಠೇವಣಿ, ರೆಕರಿಂಗ್ ಡೆಪಾಸಿಟ್, ಉಳಿತಾಯ ಖಾತೆ ಸೇರಿ ಹಲವು ಖಾತೆಗಳ ಸೇವೆಯ ಮೂಲಕ ಮನೆಮಾತಾಗಿದೆ. ಅಲ್ಲದೆ, ದೇಶದ ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್ ಎನಿಸಿದೆ. ಇಂತಹ ಎಸ್ಬಿಐ ಈಗ ಹೊಸದೊಂದು ಯೋಜನೆ ಜತೆ ಬಂದಿದ್ದು, ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.
ಎಸ್ಬಿಐ ಗ್ರಾಹಕರು ನೆಟ್ ಬ್ಯಾಂಕಿಂಗ್ ಮೂಲಕ ಎಫ್ಡಿ ಅಕೌಂಟ್ ತೆಗೆದು, ನಿಯಮಿತ ಮೊತ್ತವನ್ನು ಐದು ವರ್ಷದವರೆಗೆ ಬಿಟ್ಟರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಡಿ ಪ್ರಕಾರ ತೆರಿಗೆ ಉಳಿತಾಯ ಮಾಡುವ ಅವಕಾಶವನ್ನು ಎಸ್ಬಿಐ ನೀಡುತ್ತಿದೆ.
ಗ್ರಾಹಕರು ಕಡ್ಡಾಯವಾಗಿ ಎಫ್ಡಿ ಖಾತೆಯಲ್ಲಿಮೊತ್ತವನ್ನು ಐದು ವರ್ಷ ತುಂಬುವವರೆಗೆ ಇಡಲೇಬೇಕು. ಇಲ್ಲದಿದ್ದರೆ ಬಡ್ಡಿ ಸಿಗುವುದಿಲ್ಲ ಹಾಗೂ ತೆರಿಗೆ ವಿನಾಯಿತಿ ಸಿಗುವುದಿಲ್ಲಎಂದು ಬ್ಯಾಂಕ್ ಸ್ಪಷ್ಟವಾಗಿ ತಿಳಿಸಿದೆ. ಹಾಗಾಗಿ ಗ್ರಾಹಕರು ಬಡ್ಡಿ ಪಡೆಯುವ ಜತೆಗೆ ತೆರಿಗೆ ಉಳಿಸಲು ಐದು ವರ್ಷ ಕಡ್ಡಾಯವಾಗಿ ಎಫ್ಡಿ ಖಾತೆಯಲ್ಲಿ ಹಣವನ್ನು ಬಿಡಬೇಕಾಗಿದೆ.
ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಪತ್ನಿ, ಪತಿಯಿಂದ ಘೋರ ಕೃತ್ಯ
ಖಾತೆ ತೆರೆಯಲು ಗ್ರಾಹಕರು ಎಸ್ಬಿಐ ಅಧಿಕೃತ ನೆಟ್ ಬ್ಯಾಂಕಿಂಗ್ ಪೋರ್ಟಲ್ಗೆ ಭೇಟಿ ನೀಡಿ, ಫಿಕ್ಸೆಡ್ ಡೆಪಾಸಿಟ್ ಮೇಲೆ ಕ್ಲಿಕ್ ಮಾಡಿ, ’ಇ-ಟಿಡಿಆರ್/ಇಎಸ್ಟಿಡಿಆರ್ ಎಫ್ಡಿ’ ಮೇಲೆ ಕ್ಲಿಕ್ ಮಾಡಬೇಕು. ಇ-ಟಿಡಿಆರ್/ಇಎಸ್ಟಿಡಿಆರ್ ಎಫ್ಡಿ ಸೆಲೆಕ್ಟ್ ಮಾಡಿ, ಪ್ರೊಸೀಡ್ ಬಟನ್ ಕ್ಲಿಕ್ ಮಾಡಬೇಕು. ನಂತರ ಎಫ್ಡಿ ಅಕೌಂಟ್ ಸೆಲೆಕ್ಟ್ ಮಾಡಿ, ನಿಯಮಿತ ಹಣವನ್ನು ಠೇವಣಿ ಇಡಬೇಕು. ಎಲ್ಲ ನಿಯಮಗಳನ್ನು ಜಾಗ್ರತೆಯಿಂದ ಓದಿ ’ಸಬ್ಮಿಟ್’ ಬಟನ್ ಕ್ಲಿಕ್ ಮಾಡಿದರೆ ಎಫ್ಡಿ ಖಾತೆ ತೆರೆದಂತಾಗುತ್ತದೆ.