alex Certify ‘ಗೃಹ ಸಾಲ’ ಪಡೆಯುವ ಆಲೋಚನೆ ಮಾಡುತ್ತಿದ್ದೀರಾ…? ಹಾಗಿದ್ದಲ್ಲಿ ನಿಮಗೆ ಅರಿವಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗೃಹ ಸಾಲ’ ಪಡೆಯುವ ಆಲೋಚನೆ ಮಾಡುತ್ತಿದ್ದೀರಾ…? ಹಾಗಿದ್ದಲ್ಲಿ ನಿಮಗೆ ಅರಿವಿರಲಿ ಈ ವಿಷಯ

ಮನೆ ಖರೀದಿ ಮಾಡುವುದು ಸಾಮಾನ್ಯವಾಗಿ ಬಲು ಕ್ಲಿಷ್ಟವಾದ ಪ್ರಕ್ರಿಯೆಯಾಗಿದ್ದು, ಬಹಳಷ್ಟು ದಾಖಲೆಗಳ ಸಿದ್ಧತೆ, ಹಣ ಹಾಗೂ ಸಮಯಾವಕಾಶ ಬೇಡುತ್ತದೆ. ಆಸ್ತಿ ಖರೀದಿಗೆ ದೊಡ್ಡ ಮೊತ್ತದಲ್ಲಿ ಹಣ ಬೇಕಾದ ಕಾರಣ ಮಧ್ಯಮ ವರ್ಗದ ಮಂದಿಗೆ ಬ್ಯಾಂಕ್ ಹಾಗೂ ಇತರೆ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯಬೇಕಾಗುತ್ತದೆ.

ಆದರೆ ಗೃಹ ಸಾಲಗಳಲ್ಲಿ ವೈಯಕ್ತಿಕ, ವಾಹನ ಹಾಗೂ ಶಿಕ್ಷಣ ಸಾಲಕ್ಕಿಂತ ದೊಡ್ಡ ಮೊತ್ತದ ಸಾಲ ಪಡೆಯಬೇಕಾದ ಕಾರಣ ಈ ಸಾಲವೇ ಬೇರೆಯ ರೀತಿಯದ್ದು. ಗೃಹ ಸಾಲ ಪಡೆಯುವಾಗ ಇಎಂಐ, ತೆರಿಗೆ ಲಾಭಗಳು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಅರಿವು ಇರಬೇಕಾಗುತ್ತದೆ.

ಗೃಹ ಸಾಲ ಪಡೆಯಲು ನೋಡುವ ಮಂದಿ ಈ ಐದು ವಿಷಯಗಳ ಬಗ್ಗೆ ಅರಿವಿಟ್ಟುಕೊಳ್ಳಬೇಕಾದ ಅಗತ್ಯವಿದೆ.

* ಪಾನ್, ಆಧಾರ್‌ ಕಾರ್ಡ್, ಸದರಿ ವಿಳಾಸದ ಸಾಕ್ಷಿ, ಪಾಸ್‌ಪೋರ್ಟ್ ಗಾತ್ರದ ಫೋಟೋಗ್ರಾಫ್‌, ಆದಾಯ ಪ್ರಮಾಣ ಪತ್ರಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಬೇಕು. ಕಳೆದ 3-6 ತಿಂಗಳುಗಳ ವೇತನದ ಪ್ರಮಾಣ ಪತ್ರ, ಆದಾಯ ತೆರಿಗೆಯ ಸಾಕ್ಷ್ಯಾಧಾರಗಳು, ಕಳೆದ ಎರಡು ವಿತ್ತೀಯ ವರ್ಷದ ಫಾರಂ 26ಎಎಸ್‌ ಸಿದ್ಧವಿಟ್ಟುಕೊಳ್ಳಬೇಕು.

* ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುವ ಬ್ಯಾಂಕ್ ಯಾವುದೆಂದು ಕಂಡುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಈ ನಡೆಯಿಂದ ನಿಮ್ಮ ಮೇಲೆ ಮಾಸಿಕ ಹೊರೆ ಕಡಿಮೆಯಾಗಲಿದ್ದು, ಸುದೀರ್ಘಾವಧಿಗೆ ತುಸು ನಿರಾಳತೆ ಮೂಡಿಸಲಿದೆ.

*ನಿಮ್ಮ ವಾರ್ಷಿಕ ವೇತನದ 5-6 ಪಟ್ಟು ಮೊತ್ತವನ್ನು ಬ್ಯಾಂಕುಗಳು ಗೃಹ ಸಾಲಕ್ಕೆ ಮಂಜೂರು ಮಾಡುವ ಸಾಧ್ಯತೆ ಇರುತ್ತದೆ. ಸಹ ಅರ್ಜಿದಾರರು ಇದ್ದಲ್ಲಿ ಈ ಮೊತ್ತ ಇನ್ನಷ್ಟು ಹೆಚ್ಚಿರಲಿದೆ. ವೃತ್ತಿ ಹಾಗೂ ಮರುಪಾವತಿ ಸಾಮರ್ಥ್ಯ ಆಧರಿಸಿ ಸಾಲ ಮೊತ್ತ ನಿರ್ಧರಿತವಾಗುತ್ತದೆ.

ಸಾಮಾನ್ಯವಾಗಿ ಖರೀದಿ ಮಾಡಲಿಚ್ಛಿಸುವ ಆಸ್ತಿಯ ಮೌಲ್ಯವನ್ನು ಆಧರಿಸಿ, ಅದರ 80-90%ರಷ್ಟು ಮೊತ್ತವನ್ನು ಬ್ಯಾಂಕುಗಳು ಸಾಲದ ರೂಪದಲ್ಲಿ ಕೊಡಬಹುದು.

* ನಿಮಗೆ ಎಷ್ಟು ಸಾಲ ಕೊಡಬಹುದು ಎಂದು ಬ್ಯಾಂಕು ಅಂದಾಜು ಕೊಟ್ಟ ಬಳಿಕ ಅಷ್ಟು ಮೊತ್ತವನ್ನು ಮರುಪಾವತಿ ಮಾಡಲು ತೆಗೆದುಕೊಳ್ಳುವ ಕಾಲಾವಧಿಯ ಲೆಕ್ಕಾಚಾರ ಮಾಡುವುದು ಬಹಳ ಮುಖ್ಯ. ಗೃಹ ಸಾಲ ಮರುಪಾವತಿ ಮಾಡಲು 30 ವರ್ಷಗಳ ಕಾಲಾವಧಿ ಇರಲಿದೆ. ನಿಮ್ಮ ಈಗಿನ ವಯಸ್ಸನ್ನು ಲೆಕ್ಕಕ್ಕೆ ತೆಗೆದುಕೊಂಡು ಮರುಪಾವತಿಯ ಪ್ಲಾನಿಂಗ್ ಮಾಡಿಕೊಳ್ಳಬೇಕು.

ಸಾಲ ಮರುಪಾವತಿಗೆ ಹೆಚ್ಚು ಅವಧಿ ತೆಗೆದುಕೊಂಡಷ್ಟೂ ಸಾಲದ ಮೇಲಿನ ಬಡ್ಡಿ ಪಾವತಿ ಹೆಚ್ಚಿರಲಿದೆ.

* ಬ್ಯಾಂಕುಗಳು ನಿಮಗೆ ಗೃಹ ಸಾಲ ಮಂಜೂರು ಮಾಡಿದ ಬಳಿಕ ನಿಮಗೆ ಅನೇಕ ರೀತಿಯ ತೆರಿಗೆ ಪ್ರಯೋಜನಗಳು ಲಭಿಸಲಿವೆ. ಸಾಲದ ಇಎಂಐ ಪಾವತಿ ಮೇಲೆ ಸೇರಿದಂತೆ ಅನೇಕ ರೀತಿಯ ತೆರಿಗೆ ಉಳಿತಾಯ ಲಾಭಗಳು ನಿಮಗೆ ಸಿಗಲಿವೆ.

ಸೆಕ್ಷನ್ 80ಸಿ ಹಾಗೂ 80ಡಿ ಅಡಿ, ಗೃಹ ಸಾಲ ಪಡೆದ ವ್ಯಕ್ತಿಗಳು ಅನೇಕ ರೀತಿಯ ತೆರಿಗೆ ಕಡಿತಗಳ ಪ್ರಯೋಜನ ಪಡೆದುಕೊಳ್ಳಬಹುದು.

ವರ್ಷವೊಂದರಲ್ಲಿ ಬಡ್ಡಿ ಮೇಲಿನ ಸಾಲವನ್ನು ಇಎಂಐ ರೂಪದಲ್ಲಿ ಪಾವತಿ ಮಾಡಿದಷ್ಟು ಹಣವನ್ನು ನಿಮ್ಮ ವಾರ್ಷಿಕ ಆದಾಯದಲ್ಲಿ ಕಡಿತ ಮಾಡಿಕೊಳ್ಳಬಹುದಾಗಿದ್ದು, ಇದಕ್ಕೆ ತೆರಿಗೆ ಕಾಯಿದೆಯ 24ನೇ ವಿಧಿಯಲ್ಲಿ ಅವಕಾಶ ಇದೆ. ಇದೇ ರೀತಿ ಅಸಲು ಮರುಪಾವತಿ ಮೇಲೂ ಸಹ ತೆರಿಗೆ ಕಡಿತದ ಲಾಭ ಪಡೆಯಬಹುದಾಗಿದ್ದು, ಆದಾಯ ತೆರಿಗೆ ಕಾಯಿದೆಯ 80ಸಿ ವಿಧಿಯಡಿ ಇದಕ್ಕೆ ಅವಕಾಶ ಇದೆ. ಇದರ ಅಡಿ ಗರಿಷ್ಠ 1.5 ಲಕ್ಷ ರೂ.ಗಳವರೆಗೂ ಕ್ಲೇಂ ಮಾಡಬಹುದಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...