ಮೇಕ್ ಇನ್ ಇಂಡಿಯಾಕ್ಕೆ ಪ್ರೋತ್ಸಾಹ ನೀಡಲು ಆಪಲ್ ಮುಂದೆ ಬಂದಿದೆ. ಆಪಲ್ ತನ್ನ ಪ್ರಸಿದ್ಧ ಹಾಗೂ ಪರಿಸರ ಸ್ನೇಹಿ ಐಫೋನ್ 12 ಸ್ಮಾರ್ಟ್ಫೋನ್ ಉತ್ಪಾದನೆಯನ್ನು ಶೀಘ್ರವೇ ಭಾರತದಲ್ಲಿ ಶುರು ಮಾಡಲಿದೆ. ಈ ಬಗ್ಗೆ ಆಪಲ್ ಅಧಿಕೃತ ಘೋಷಣೆ ಮಾಡಿದೆ. ಸ್ಥಳೀಯ ಗ್ರಾಹಕರಿಗಾಗಿ ಭಾರತದಲ್ಲಿಯೇ ಐಫೋನ್ 12 ಉತ್ಪಾದಿಸಲು ಮುಂದಾಗಿದ್ದು, ಇದು ಹೆಮ್ಮೆ ವಿಷಯವೆಂದು ಆಪಲ್ ಹೇಳಿದೆ.
ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಮಹತ್ವದ ಸುದ್ದಿ: ಏ.1 ರಿಂದ ಜಾರಿಗೆ ಬರಲಿದೆ ಈ ನಿಯಮ
ಭಾರತದಲ್ಲಿ ಐಫೋನ್ 12 ಸ್ಮಾರ್ಟ್ಫೋನ್ ಗೆ ಹೆಚ್ಚಿನ ಬೇಡಿಕೆಯಿದೆ. ಹಿಂದಿನ ವರ್ಷ ಅಕ್ಟೋಬರ್ ನಲ್ಲಿ ಆಪಲ್ ಸ್ಮಾರ್ಟ್ಫೋನ್ ಗಳ ಮಾರಾಟ ಹೆಚ್ಚಾಗಿತ್ತು. 2020ರಲ್ಲಿ ಈ ಕಂಪನಿ ವ್ಯವಹಾರ ವಾರ್ಷಿಕವಾಗಿ ಶೇಕಡಾ 60ರಷ್ಟು ಬೆಳವಣಿಗೆ ಕಂಡಿತ್ತು. ಹಬ್ಬದ ರುತುವಿನಲ್ಲಿ ಇದ್ರ ಪ್ರಮಾಣ ಶೇಕಡಾ 100ರಷ್ಟಿತ್ತು.
ಐಫೋನ್ ಎಸ್ಇ ನೊಂದಿಗೆ 2017ರಲ್ಲಿ ಆಪಲ್, ಭಾರತದಲ್ಲಿ ಐಫೋನ್ ತಯಾರಿಸಲು ಪ್ರಾರಂಭಿಸಿತ್ತು. ಆಪಲ್ ಭಾರತದಲ್ಲಿ ಎಕ್ಸ್ಆರ್, ಐಫೋನ್ 11 ಮತ್ತು ಈಗ ಐಫೋನ್ 12 ಉತ್ಪಾದಿಸಲಿದೆ. ಐಫೋನ್ 12, 5ಜಿ ತಂತ್ರಜ್ಞಾನವನ್ನು ಹೊಂದಿದೆ. ಎ 14 ಬಯೋನಿಕ್ ಚಿಪ್, ಎಡ್ಜ್-ಟು-ಎಡ್ಜ್ ಸೂಪರ್ ರೆಟಿನಾ, ಎಕ್ಸ್ ಡಿಆರ್ ಡಿಸ್ಪ್ಲೇ, ಸುಧಾರಿತ ಫೋಟೋಗ್ರಫಿ ಮತ್ತು ಸೆರಾಮಿಕ್ ಶೀಲ್ಡ್ ಫ್ರಂಟ್ ಕವರನ್ನು ಇದು ಹೊಂದಿದೆ.