ಆಪಲ್‌ನ ಐಫೋನ್‌ಗಳನ್ನು ಖರೀದಿ ಮಾಡುವುದೆಂದರೆ ಅದನ್ನು ಪ್ರತಿಷ್ಠೆಯ ವಿಷಯವನ್ನಾಗಿ ತೆಗೆದುಕೊಳ್ಳುತ್ತಾರೆ ಮಂದಿ. ಈ ಪ್ರತಿಷ್ಠೆ ಭಾವ ಯಾವ ಮಟ್ಟಿಗೆ ಇದೆ ಎಂದರೆ, ಐಫೋನ್ ಒಂದರ ಹಿಂದಿನ ಆಪಲ್ ಲೋಗೋ ತಪ್ಪಾಗಿ ಪ್ರಿಂಟ್ ಆಗಿದ್ದರೂ, ಈ ಅಪರೂಪದ ’ತಪ್ಪಿಗೆ’ ಎರಡು ಲಕ್ಷ ರೂ. ಕೊಟ್ಟು ಫೋನ್ ಖರೀದಿ ಮಾಡುವ ಮಟ್ಟಿಗೆ.
ಬಹಳ ಕಠಿಣವಾದ ಗುಣಮಟ್ಟ ಖಾತ್ರಿ ಪ್ರಕ್ರಿಯೆಗಳನ್ನು ಹೊಂದಿರುವ ಆಪಲ್ ತನ್ನ ಪ್ರತಿಯೊಂದು ಉತ್ಪನ್ನವೂ ಗ್ರಾಹಕರಿಗೆ ತಲುಪುವ ಮುನ್ನ ಅದು ಎಲ್ಲಾ ಆಯಾಮದಲ್ಲೂ ಸರಿಯಾಗಿದೆ ಎಂದು ಖಾತ್ರಿ ಮಾಡಿಕೊಳ್ಳುತ್ತದೆ. ಆದರೂ ದಶಲಕ್ಷಕ್ಕೊಂದು ಕೇಸ್‌ನಲ್ಲಿ ಐಫೋನ್ ಒಂದು ಗುಣಮಟ್ಟ ಖಾತ್ರಿ ಪ್ರಕ್ರಿಯೆ ದಾಟಿ ಬಂದ ಮೇಲೂ ತಪ್ಪೊಂದನ್ನು ಹೊಂದಿದ್ದರೂ ಸಹ $2,700ಕ್ಕೆ ಸೇಲ್ ಆಗಿದೆ.
ಪ್ರಯಾಣಿಕ ವಾಹನಗಳ ತೆರಿಗೆ: ಸರ್ಕಾರದಿಂದ ಗುಡ್ ನ್ಯೂಸ್
ಐಫೋನ್ 11 ಪ್ರೋ ಮಾಡೆಲ್‌ನ ಈ ಫೋನ್‌ನ ಹಿಂದೆ ಇರುವ ಆಪಲ್ ಲೋಗೋ ಸರಿಯಾಗಿ ಮಧ್ಯದಲ್ಲಿ ಇರದೇ ಸ್ವಲ್ಪ ಮಟ್ಟಿಗೆ ಬದಿಯಲ್ಲಿ ಪ್ರಿಂಟ್ ಆಗಿದೆ. ಒಂದು ನಿರ್ದಿಷ್ಟ ಕೋನದಿಂದ ಫೋನ್ ಅನ್ನು ನೋಡಿದಾಗ ಈ ಪ್ರಮಾದವನ್ನು ಕಂಡುಕೊಳ್ಳಬಹುದಾಗಿದೆ. ಈ ಐಫೋನ್ ಎಲ್ಲಿ ಮಾರಾಟವಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.
https://twitter.com/ArchiveInternal/status/1380511781131550722?ref_src=twsrc%5Etfw%7Ctwcamp%5Etweetembed%7Ctwterm%5E1380511781131550722%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fapple-iphone-11-pro-with-extremely-rare-misprinted-logo-sells-for-over-rs-2-lakh-3632159.html