ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಆಪಲ್ ಫೋನ್ ತಯಾರಿಕಾ ಕಂಪನಿ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಆಪಲ್ ಕಂಪನಿ ಮಹತ್ವದ ಸೂಚನೆ ನೀಡಿದೆ.
ಕಾರ್ಮಿಕರ ನೇಮಕಾತಿಯನ್ನು ಏಜೆನ್ಸಿಗಳಿಗೆ ವಹಿಸದೇ ನೇರ ನೇಮಕಾತಿ ಮಾಡಿಕೊಳ್ಳುವಂತೆ ಕಂಪನಿಗೆ ಸೂಚಿಸಲಾಗಿದೆ. ವಿಸ್ಟ್ರಾನ್ ಕಂಪನಿ ವರ್ತನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಮಿಕರಿಗೆ ಶೀಘ್ರವೇ ವೇತನ ನೀಡಬೇಕು. ಏಜೆನ್ಸಿ ನೇಮಕಾತಿ ರದ್ದುಗೊಳಿಸಿ ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದೆ.
ಕಂಪನಿಯಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಆಪಲ್ ಕಂಪನಿ, ವಿಸ್ಟ್ರಾನ್ ಕಾರ್ಮಿಕರಿಗೆ ಬಾಕಿ ಉಳಿದ ಎಲ್ಲಾ ವೇತನವನ್ನು ಕೂಡಲೇ ಪಾವತಿಸಬೇಕು. ಕಾರ್ಮಿಕರ ನೇಮಕಾತಿಗೆ ಏಜೆನ್ಸಿಗಳನ್ನು ರದ್ದುಪಡಿಸಿ ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದು ಹೇಳಲಾಗಿದೆ.