ನವದೆಹಲಿ: ವಾಹನ ಸವಾರರು ಮತ್ತು ಟೋಲ್ ನಿರ್ವಹಣೆ ಸಿಬ್ಬಂದಿಗೆ ಅನುಕೂಲವಾಗುವಂತೆ ಮೈ ಫಾಸ್ಟ್ಯಾಗ್ ಆಪ್ ನಲ್ಲಿ ಹೊಸ ಆಯ್ಕೆ ನೀಡಲಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟಾಗ್ ಆಪ್ ನಲ್ಲಿ ಬ್ಯಾಲೆನ್ಸ್ ಸ್ಟೇಟಸ್ ಪರಿಶೀಲನೆ ಆಯ್ಕೆಯನ್ನು ನೀಡಿದ್ದು, ಈ ಆಪ್ ನಲ್ಲಿ ವಾಹನದ ಸಂಖ್ಯೆ ನಮೂದಿಸಿದಲ್ಲಿ ಫಾಸ್ಟ್ಯಾಗ್ ಸಕ್ರಿಯವಾಗಿದೆಯೇ? ನಿಷ್ಕ್ರಿಯವಾಗಿದೆಯೇ? ಉಳಿಕೆ ಮೊತ್ತ ಎಷ್ಟು ಎಂಬ ಮಾಹಿತಿ ಗೊತ್ತಾಗಲಿದೆ.
ಕಡಿಮೆ ಹಣ ಅಥವಾ ಹಣವಿಲ್ಲದ ಸಂದರ್ಭದಲ್ಲಿ ಫಾಸ್ಟ್ಯಾಗ್ ಕಪ್ಪುಪಟ್ಟಿಗೆ ಸೇರಿದ್ದರೆ ಅದನ್ನು ಸರಿಪಡಿಸಲು ರಿಫ್ರೆಶ್ ಸಮಯವನ್ನು 10 ನಿಮಿಷದಿಂದ ಮೂರು ನಿಮಿಷಕ್ಕೆ ಇಳಿಸಲಾಗಿದೆ. ಹೆದ್ದಾರಿಗಳಲ್ಲಿ ಇಂಧನ, ಸಮಯ ಉಳಿತಾಯ, ಡಿಜಿಟಲ್ ರೂಪದಲ್ಲಿ ಶುಲ್ಕ ಸಂಗ್ರಹ ಉದ್ದೇಶದಿಂದ ಫಾಸ್ಟ್ಯಾಗ್ ಜಾರಿಗೆ ತಂದಿದ್ದು, ಇದಕ್ಕೆ ಸಂಬಂಧಿಸಿದ ಆಪ್ ನಲ್ಲಿ ಹೊಸ ಆಯ್ಕೆ ನೀಡಲಾಗಿದೆ.