![](https://kannadadunia.com/wp-content/uploads/2020/02/AdobeStock_171258919-1024x576.jpeg)
ಚೀನಾ ವಿರುದ್ದದ ಸಂಘರ್ಷದಲ್ಲಿ ನಮ್ಮ 20 ವೀರ ಯೋಧರು ಹುತಾತ್ಮರಾದ ಬಳಿಕ ಚೀನಾಗೆ ತಕ್ಕ ಪಾಠ ಕಲಿಸಲು ಮುಂದಾಗಿರುವ ಭಾರತ ಸರ್ಕಾರ, 59 ಚೈನಾ ಮೊಬೈಲ್ ಆಪ್ ಗಳನ್ನು ಬ್ಯಾನ್ ಮಾಡಿದೆ. ಆದರೆ ದೇಶದ ಉದ್ದಗಲಕ್ಕೆ ಚೈನಾ ಸ್ಮಾರ್ಟ್ ಫೋನ್ ಬಳಸುತ್ತಿರುವವರಿಗೆ ಈ ಬ್ಯಾನ್ ಪರಿಣಾಮ ತಕ್ಷಣಕ್ಕೆ ಬೀರುವುದಿಲ್ಲ.
ಚೈನಾ ಕಂಪನಿಗಳಾದ ಕ್ಸಿಯೋಮಿ, ಒಪ್ಪೋ, ವಿವೋ ಮತ್ತು ರಿಯಲ್ ಮಿ ಮೊಬೈಲ್ ಗಳಲ್ಲಿ ಬ್ಯಾನ್ ಆದ ಆಪ್ ಗಳು ಸದ್ಯಕ್ಕಂತೂ ಕಾರ್ಯ ನಿರ್ವಹಿಸುತ್ತವೆ. ಆದರೆ ಮೊಬೈಲ್ ಉತ್ಪಾದಕರ ಮೇಲಂತೂ ಪರಿಣಾಮ ಬೀರುವುದು ನಿಶ್ಚಿತ.
ಮಾರುಕಟ್ಟೆಯಲ್ಲಿ ಮೊಬೈಲ್ ಉತ್ಪಾದಕರ ಬಲವಾದ ಹಿಡಿತಕ್ಕೆ ಸರ್ಕಾರದ ತೀರ್ಮಾನ ಪೆಟ್ಟು ಕೊಡಲಿದೆ. ಇತ್ತೀಚಿನ ದಿನಗಳಲ್ಲಿ ಚೈನಾ ಉತ್ಪನ್ನಗಳ ವಿರೋಧಿ ಭಾವನೆ ಹೆಚ್ಚಾಗುತ್ತಿರುವುದರಿಂದ ಉತ್ಪಾದಕರ ಮೇಲೆ ಪರಿಣಾಮ ಸಹಜ ಎಂದು ಹೇಳಲಾಗುತ್ತಿದೆ.
ಚೈನಾ ಕಂಪನಿಗಳಲ್ಲಿ ಈಗ ಅನಿಶ್ಚಿತತೆ ಮೂಡಿದೆ, ಕೊಳ್ಳುವರು ಭವಿಷ್ಯದ ಸುರಕ್ಷತೆ ಗಮನಿಸಿ ಚೈನಾ ಉತ್ಪನ್ನಗಳಿಂದ ದೂರ ಉಳಿಯಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಚೈನಾಗೆ ಸಂಬಂಧಪಡದ ವಿವಿಧ ಕಂಪನಿಗಳೂ ಸಹ ಚೈನಾ ಜನಪ್ರಿಯ ಅಪ್ ಗಳನ್ನು ಇನ್ಸ್ಟಾಲ್ ಮಾಡಿಕೊಡುತ್ತಿದ್ದವು, ಇನ್ನು ಮುಂದೆ ಅವು ಬಳಸುವುದಿಲ್ಲ.
ಸರ್ಕಾರ ಮೊಬೈಲ್ ಅಪ್ಲಿಕೇಶನ್ ನಿಷೇಧಿಸಿದ ಆಜ್ಞೆಯನ್ನು ಜಾರಿಗೆ ತಂದ ನಂತರ ಅವು ಆಂಡ್ರಾಯ್ಡ್ ಅಥವಾ ಐಒಎಸ್ ಅಪ್ಲಿಕೇಶನ್ ಪ್ಲೇ ಸ್ಟೋರ್ ನಲ್ಲಿ ಇರುವುದಿಲ್ಲ. ಆದರೆ ಈಗಾಗಲೇ ಡೌನ್ ಲೋಡ್ ಆದ ಅಪ್ಲಿಕೇಷನ್ ಕಾರ್ಯನಿರ್ವಹಿಸುವುದು.
ಅಲ್ಲದೇ ಟಿಕ್ ಟಾಕ್ ಹೊರತುಪಡಿಸಿ ನಿಷೇಧಕ್ಕೊಳಪಟ್ಟಿರುವ ಶೇರ್ ಇಟ್, ಯುಸಿ ಬ್ರೌಸರ್ ಮೊದಲಾದ ಕೆಲ ಆಪ್ ಗಳು ಇನ್ನೂ ಪ್ಲೇ ಸ್ಟೋರ್ ನಲ್ಲಿ ಲಭ್ಯವಾಗುತ್ತಿವೆ.