ಲಾಭಕರ ವ್ಯಾಪಾರದಲ್ಲಿ ಹಾಲು ವ್ಯಾಪಾರ ಕೂಡ ಒಂದು. ಹಾಲು ವ್ಯಾಪಾರ ಮಾಡುವುದ್ರಲ್ಲಿ ಮಹಿಳೆಯರು ಹಿಂದೆ ಬಿದ್ದಿಲ್ಲ. 2019-20ರ ಆರ್ಥಿಕ ವರ್ಷದಲ್ಲಿ ಅಮುಲ್‌ಗೆ ಹಾಲು ಮಾರಾಟ ಮಾಡುವ ಮೂಲಕ ಮಹಿಳೆಯರು ಲಕ್ಷಾಂತರ ರೂಪಾಯಿ ಗಳಿಸಿದ್ದಾರೆ.
ಅಮುಲ್ 10 ಲಕ್ಷಾಧಿಪತಿ ಗ್ರಾಮೀಣ ಮಹಿಳಾ ಉದ್ಯಮಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಎಲ್ಲ ಮಹಿಳೆಯರು ಡೈರಿ ಮತ್ತು ಪಶುಸಂಗೋಪನಾ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಹಿಳಾ ಉದ್ಯಮಿಗಳು 2019-20ರ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಹಾಲನ್ನು ಮಾರಾಟ ಮಾಡಿದ್ದಾರೆ.
ಮೊದಲ ಸ್ಥಾನದಲ್ಲಿ ಚೌಧರಿ ನವಲ್ಬೆನ್ ಇದಾರೆ. ಅವರು 2019-20ರಲ್ಲಿ 221595.6 ಲೀಟರ್ ಹಾಲನ್ನು ಮಾರಾಟ ಮಾಡುವ ಮೂಲಕ 87,95,900.67 ರೂಪಾಯಿ ವ್ಯಾಪಾರ ನಡೆಸಿದ್ದಾರೆ.
250745.4 ಲೀಟರ್ ಹಾಲು ಮಾರಾಟ ಮಾಡಿ 73,56,615.03 ರೂಪಾಯಿ ಗಳಿಸಿ ಕಾನುಬೆನ್ ರಾವತ್‌ಭಾಯ್ ಎರಡನೇ ಸ್ಥಾನದಲ್ಲಿದ್ದಾರೆ. ಹನ್ಸಾಬಾ ಹಿಮ್ಮತ್ ಸಿಂಗ್ 268767 ಲೀಟರ್ ಹಾಲು ಮಾರಾಟ ಮಾಡಿ 72,19,405.52 ರೂಪಾಯಿ ಗಳಿಸಿದ್ದಾರೆ.