ನವದೆಹಲಿ: ಮೂಲಸೌಕರ್ಯ ಯೋಜನೆ ಆಸ್ತಿ ನಗದೀಕರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿ ನಗದೀಕರಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ.
ವಿತ್ತೀಯ ಕೊರತೆಯನ್ನು ನೀಗಿಸಲು ಆಸ್ತಿ ನಗದೀಕರಣಕ್ಕೆ ತೀರ್ಮಾನಿಸಲಾಗಿದೆ. ದೆಹಲಿಯಲ್ಲಿ ಕೇಂದ್ರದ ಹಣಕಾಸು ಇಲಾಖೆಯಿಂದ ಸುದ್ದಿಗೋಷ್ಠಿ ನಡೆಸಲಾಗಿದೆ. ನೀತಿ ಆಯೋಗದ ಸಿಇಓ ಅಮಿತಾಭ್ ಕಾಂತ್ ಅವರು ಮಾತನಾಡಿ ಆಸ್ತಿಯ ಮಾಲೀಕತ್ವ ಸರ್ಕಾರದ ಬಳಿಯೇ ಇರುತ್ತದೆ. ಅವಧಿ ಮುಗಿದ ನಂತರ ಸರ್ಕಾರಕ್ಕೆ ಆಸ್ತಿಯನ್ನು ಹಿಂತಿರುಗಿಸಬೇಕು. ಬಿಡ್ಡಿಂಗ್ ಮೂಲಕ ಆಸ್ತಿಗಳ ಮಾರಾಟ ಮಾಡಲಾಗುತ್ತದೆ. ಇದು ಆಪರೇಟ್, ಮೆಂಟೇನ್ ಅಂಡ್ ಟ್ರಾನ್ಸ್ಫರ್ ಸ್ಕೀಮ್ ಆಗಿರುತ್ತದೆ. 2022 ರಿಂದ 25 ರ ಅವಧಿಯಲ್ಲಿ ಆಸ್ತಿ ನಗದೀಕರಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.